ADVERTISEMENT

ಕುಕನೂರು | ಆಕಸ್ಮಿಕ ಬೆಂಕಿ; ಕಡಲೆ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 5:51 IST
Last Updated 8 ಫೆಬ್ರುವರಿ 2026, 5:51 IST
ಕುಕನೂರು ತಾಲ್ಲೂಕಿನ ಬಳಗೇರಿ ಗ್ರಾಮದ ರೈತ ರಾಮಪ್ಪ ಹೊಂಬಾಳ ಎಂಬುವರಿಗೆ ಸೇರಿದ ಕಡಲೆ ಬೆಳೆ ಸುಟ್ಟು ಕರುಕಲಾಗಿದೆ
ಕುಕನೂರು ತಾಲ್ಲೂಕಿನ ಬಳಗೇರಿ ಗ್ರಾಮದ ರೈತ ರಾಮಪ್ಪ ಹೊಂಬಾಳ ಎಂಬುವರಿಗೆ ಸೇರಿದ ಕಡಲೆ ಬೆಳೆ ಸುಟ್ಟು ಕರುಕಲಾಗಿದೆ   

ಕುಕನೂರು: ತಾಲ್ಲೂಕಿನ ಬಳಗೇರಿ ಗ್ರಾಮದ ರಾಮಪ್ಪ ಹೊಂಬಾಳೆ ಎಂಬುವರಿಗೆ ಸೇರಿದ ಕಡಲೆ ಬೆಳೆ ಹಾಗೂ ಹೊಟ್ಟು ಆಕಸ್ಮಿಕ ಬೆಂಕಿಗೆ ಸುಟ್ಟು ಕರುಕಲಾಗಿದೆ.

4 ಎಕರೆ ಕಡಲೆ ಬೆಳೆಯಲ್ಲಿ ₹65 ಸಾವಿರ ಅಂದಾಜು ಕಡಲೆ ಬೆಳೆ ಹಾಗೂ ₹30 ಸಾವಿರ ಕಡಲೆ ಹೊಟ್ಟು ಸುಟ್ಟು ಕರುಕಲಾಗಿದೆ.

ಸರಿಯಾದ ಸಮಯಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದ್ದಾರೆ.

ADVERTISEMENT

ಅಗ್ನಿ ಅವಘಡದಲ್ಲಿ ಗಂಗಮ್ಮ ಹೊಂಬಾಳ್ ಎಂಬುವರಿಗೆ ಬಲಗೈ ಹಾಗೂ ಬಲ ಮುಖ ಗಾಯಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.