ಮುನಿರಾಬಾದ್: ಸಮೀಪದ ಹೊಸ ಲಿಂಗಾಪುರ ಗ್ರಾಮದ ಸತ್ಯಶ್ರೀ ವಿಜಯಕುಮಾರ ಅವರು ಈಚೆಗೆ ನಡೆದ ‘ದಸರಾ ಕ್ರೀಡಾಕೂಟ’ದ ಮಹಿಳಾ ಕುಸ್ತಿ ಪಂದ್ಯದಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕಕ್ಕೆ ಭಾಜನರಾಗಿದ್ದಾರೆ.
ಮೈಸೂರಿನಲ್ಲಿ ಸೆ.22 ರಿಂದ 25ರ ವರೆಗೆ ನಡೆದ ಸಿಎಂ ಕಪ್ ದಸರಾ ಕ್ರೀಡಾಕೂಟದ 76 ಕೆಜಿ ವಿಭಾಗದಲ್ಲಿ ಅವರು ಸ್ಪರ್ಧಿಸಿದ್ದರು.
ಹೊಸಲಿಂಗಾಪುರ ಗ್ರಾಮದ ಸತ್ಯಶ್ರೀ ಅವರು ಹೊಸಪೇಟೆಯ ಥಿಯೋಸೊಫಿಕಲ್ ಮಹಿಳಾ ಕಾಲೇಜಿನಲ್ಲಿ ಬಿಬಿಎ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಕಳೆದ ವರ್ಷ ಆನೆಗೊಂದಿ ಉತ್ಸವದಲ್ಲಿ ಕೂಡಾ ಪುರುಷರೊಂದಿಗೆ ಸೆಣಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
ತರಬೇತುದಾರರಾದ ಮರಿಯಮ್ಮನಹಳ್ಳಿಯ ಹನುಮಂತ ಮತ್ತು ಶಿವಮೊಗ್ಗದ ಸಂಜೀವ ಅವರ ಬಳಿ ಕುಸ್ತಿ ಕಲಿಯುತ್ತಿದ್ದಾರೆ. ಕಾಲೇಜು ಆಡಳಿತ ಮಂಡಳಿ ಮತ್ತು ಗ್ರಾಮಸ್ಥರು ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.