
ಅಳವಂಡಿ: ‘ಕುಷ್ಠರೋಗವು ಸಂಪೂರ್ಣವಾಗಿ ಗುಣಪಡಿಸಬಹುದಾದ ಕಾಯಿಲೆಯಾಗಿದ್ದು, ರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಕಾಶಪ್ಪ ಹಳ್ಳಿ ಹೇಳಿದರು.
ಸಮೀಪದ ನಿಲೋಗಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ನಡೆದ ರಾಷ್ಟ್ರೀಯ ಕುಷ್ಠರೋಗ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೇಹದ ಮೇಲೆ ಯಾವುದೇ ತಿಳಿ ಬಣ್ಣದ ಮಚ್ಚೆಗಳು ಕಂಡುಬಂದಲ್ಲಿ ಕೂಡಲೇ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಯಾವುದೇ ಅಂಗವೈಕಲ್ಯ ಉಂಟಾಗುವುದಿಲ್ಲ’ ಎಂದರು.
ಮುಖ್ಯಶಿಕ್ಷಕ ಗುರುರಾಜ ಪಾಟೀಲ ಮಾತನಾಡಿ, ‘ಕುಷ್ಠರೋಗಿಗಳನ್ನು ಕೀಳರಿಮೆಯಿಂದ ಕಾಣಬಾರದು. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಜವಾಬ್ದಾರಿ’ ಎಂದರು.
ಆರೋಗ್ಯ ಇಲಾಖೆಯ ಪ್ರತಿಭಾ, ರೇಷ್ಮಾ, ಶೋಭಾ, ರೇಣುಕಾ, ಲಕ್ಷ್ಮೀಬಾಯಿ, ಶಿಕ್ಷಕರಾದ ಸಂಗಪ್ಪ ರಾಟಿ, ಮುತ್ತು ಎಚ್. ಬನ್ನಿಕೊಪ್ಪ, ಮಂಜುನಾಥ ತಗಡಿನಮನಿ, ಚಂದ್ರಶೇಖರ, ಪೂರ್ಣಿಮಾ, ಲಕ್ಷ್ಮೀ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.