ಅಳವಂಡಿ: ‘ಅತಿಯಾದ ಜನಸಂಖ್ಯೆ ದೇಶದ ಆರ್ಥಿಕ ಪ್ರಗತಿಗೆ ಅಡ್ಡಿ ಉಂಟು ಮಾಡಲಿದೆ. ಆದ್ದರಿಂದ ಪ್ರತಿಯೊಬ್ಬರು ಜನಸಂಖ್ಯೆ ನಿಯಂತ್ರಣ ಯೋಜನೆಯನ್ನು ಅಳವಡಿಸಿಕೊಳ್ಳಬೇಕು’ ಎಂದು ಆರೋಗ್ಯ ನೀರಿಕ್ಷಣಾಧಿಕಾರಿ ಕಾಶಪ್ಪ ಹೇಳಿದರು.
ಸಮೀಪದ ಹಲವಾಗಲಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕವಲೂರು ವತಿಯಿಂದ ನಡೆದ ವಿಶ್ವ ಜನಸಂಖ್ಯೆ ನಿಯಂತ್ರಣ ದಿನಾಚರಣೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಪ್ರಮಾಣ ಪತ್ರವನ್ನು ವಿತರಿಸಿ ಶುಕ್ರವಾರ ಮಾತನಾಡಿದರು.
‘ಹೆಚ್ಚಿನ ಜನಸಂಖ್ಯೆ ಅನಕ್ಷರತೆ, ಆರ್ಥಿಕ ಮುಗ್ಗಟ್ಟು, ಬಡತನಕ್ಕೆ ದಾರಿ ಮಾಡಿ ಕೊಡಲಿದೆ. ಹೆಚ್ಚು ಮಕ್ಕಳನ್ನು ಹೆರುವುದು ಸಾಧನೆಯಲ್ಲಿ ಕಡಿಮೆ ಮಕ್ಕಳಿದ್ದರೆ, ಗುಣಮಟ್ಟದ ಶಿಕ್ಷಣ, ಆರೋಗ್ಯ ಮುಂತಾದ ಮೂಲಭೂತ ಸೌಕರ್ಯಗಳು ಸಿಗಲಿವೆ. ಕಾರಣ ಎಲ್ಲರೂ ಜನಸಂಖ್ಯೆ ನಿಯಂತ್ರಣದ ಬಗ್ಗೆ ಗ್ರಾಮದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಜನಸಂಖ್ಯೆ ಹೆಚ್ಚಿದಷ್ಟು ಆರ್ಥಿಕ ಮೌಲ್ಯ ಕುಸಿಯಲಿದೆ’ ಎಂದರು.
ಪ್ರಮುಖರಾದ ಸಿದ್ದಣ್ಣ ಹಳ್ಳಿ, ಚನ್ನಪ್ಪ, ಸಂತೋಷ, ಸಾರೆಪ್ಪ ಆರೋಗ್ಯ ನೀರಿಕ್ಷಣಾಧಿಕಾರಿ ಗವಿಸಿದ್ದಪ್ಪ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.