ADVERTISEMENT

ಗಂಗಾವತಿ | ಬಳ್ಳಾರಿ ಶಾಸಕನ ಬಂಧನಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 3:14 IST
Last Updated 6 ಜನವರಿ 2026, 3:14 IST
ಗಂಗಾವತಿ ಶಾಸಕ ಜಿ.ಜನಾರ್ದನರೆಡ್ಡಿ ಮನೆಯ ಮೇಲೆ ಗುಂಡಿನ ದಾಳಿ ಮಾಡಿಸಿದ ಬಳ್ಳಾರಿ ಶಾಸಕನ ಬಂಧನಕ್ಕೆ ಒತ್ತಾಯಿಸಿ, ಬಿಜೆಪಿ ಪಕ್ಷದ ಕಾರ್ಯಕರ್ತರು ನಗರದ ತಹ ಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿ, ಶಿರಸ್ತೇದಾರ ಪ್ರಕಾಶ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಗಂಗಾವತಿ ಶಾಸಕ ಜಿ.ಜನಾರ್ದನರೆಡ್ಡಿ ಮನೆಯ ಮೇಲೆ ಗುಂಡಿನ ದಾಳಿ ಮಾಡಿಸಿದ ಬಳ್ಳಾರಿ ಶಾಸಕನ ಬಂಧನಕ್ಕೆ ಒತ್ತಾಯಿಸಿ, ಬಿಜೆಪಿ ಪಕ್ಷದ ಕಾರ್ಯಕರ್ತರು ನಗರದ ತಹ ಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿ, ಶಿರಸ್ತೇದಾರ ಪ್ರಕಾಶ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.   

ಗಂಗಾವತಿ: ಗಂಗಾವತಿ ಶಾಸಕ ಜಿ.ಜನಾರ್ದನರೆಡ್ಡಿ ಮನೆ ಮೇಲೆ ಗುಂಡಿನ ದಾಳಿ ಮಾಡಿಸಿದ ಬಳ್ಳಾರಿ ಶಾಸಕ ನಾರ ಭರತ್ ರೆಡ್ಡಿ, ಅವನ ಸಹಚರ ಸತೀಶ್ ರೆಡ್ಡಿ ಬಂಧನಕ್ಕೆ ಒ ತ್ತಾಯಿಸಿ, ಬಿಜೆಪಿ ಕಾರ್ಯಕರ್ತರು ನಗರದ ತಹಶೀಲ್ದಾರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಹೀರೂರು ಮಾತನಾಡಿ, ಬಳ್ಳಾರಿ ನಗರದಲ್ಲಿ ಜ.3 ನಡೆಯಬೇಕಿದ್ದ ಮ ಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ವಿಚಾರಕ್ಕಾಗಿ ಬಳ್ಳಾ ರಿ ನಗರದಲ್ಲಿ ಬ್ಯಾನರ ಅಳವಡಿಕೆ ಮಾಡಲಾಗುತ್ತಿತ್ತು. ಜ.1 ರಂದು ಬಳ್ಳಾರಿ ಶಾಸಕ ಭರತ್ ರೆಡ್ಡಿ ಬೆಂಬಲಿಗರು ಬಳ್ಳಾರಿ ಯಲ್ಲಿನ ಗಂಗಾವತಿ ಶಾಸಕ ಜಿ.ಜನಾರ್ದನರೆಡ್ಡಿ ಮನೆ ಮುಂ ದೆ ಬ್ಯಾನರ್ ಅಳವಡಿಕೆ ಮಾಡಲು ಬಂದಿದ್ದಾರೆ.

ಆ ಸಮಯದಲ್ಲಿ ಭರತರೆಡ್ಡಿ ಸಹಚರ ಸತೀಶರೆಡ್ಡಿ ಹಾಗೂ ಬೆಂಬಲಿಗರು ದುರುದ್ದೇಶದಿದಂಲೇ ಗಲಾಟೆ ನಡೆಸಿ, ವಿಕೃತ ಮೆರೆದಿದ್ದಾರೆ.ಜಿ.ಜನಾರ್ದನರೆಡ್ಡಿ ಗಂಗಾವತಿಯಿಂದ ಬಳ್ಳಾ ರಿಗೆ ಹೋಗುವಷ್ಟರಲ್ಲಿ ಗಲಾಟೆ ವಿಕೋಪಕ್ಕೆ ಹೋಗಿದೆ. ಜ ನಾರ್ದನರೆಡ್ಡಿ ಬಳ್ಳಾರಿ ಮನೆಗೆ ಹೋಗುತ್ತಿದ್ದಂತೆ ಭರತರೆಡ್ಡಿ ಬೆಂಬಲಿಗರು ಗುರಿಯಾಗಿಸಿಕೊಂಡು ಗುಂಡು ಹಾರಿಸಿ, ಪೆ ಟ್ರೋಲ್ ಬಾಂಬ್‌ ಸಿಡಿಸಿದ್ದಾರೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಗುಂಡಿನ ದಾಳಿಯಿಂದ ರೆಡ್ಡಿ ಮನೆಯಲ್ಲಿ ನಾಲ್ಕೈದು ಗುಂ ಡುಗಳು ಬಿದ್ದಿವೆ. ಜನಾರ್ದನರೆಡ್ಡಿ ಹತ್ಯೆ ಮಾಡುವ ಉದ್ದೇಶ ದಿಂದಲೇ ಗಲಾಟೆ ನಡೆಸಿ, ಗುಂಡಿನ ದಾಳಿ ನಡೆಸಿದೆ. ಇದರಿಂ ದ ನೂರಾರು ಜನ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಗಾಯ ಗಳಾಗಿವೆ. ಕಾಂಗ್ರೆಸ್ ಪಕ್ಷದ ಓರ್ವ ಕಾರ್ಯಕರ್ತ ಸಹ ಮೃತ ಪಟ್ಟಿದ್ದಾನೆ. ಪ್ರಾಣಕ್ಕೆ ಬೆಲೆ ಇಲ್ಲದಂತೆ ಗಲಾಟೆ ನಡೆಸಿದ ಬ ಳ್ಳಾರಿ ಶಾಸಕ ಭರತರೆಡ್ಡಿಯನ್ನು ಗಲಾಟೆ ಪ್ರಕರಣದ ಪ್ರಮು ಖ ಆರೋಪಿ ಮಾಡಿ, ಸಹಚರ ಸತೀಶರೆಡ್ಡಿಯನ್ನು ಬಂಧಿಸ ಬೇಕೆಂದು ಒತ್ತಾಯಿಸಿ, ಮನವಿ ಸಲ್ಲಿಸಿದರು.

ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷ ದುರುಗಪ್ಪ ಆಗೋಲಿ ಬಿ ಜೆಪಿ ಪಕ್ಷದ ಕಾರ್ಯಕರ್ತ ವಿರುಪಾಕ್ಷಪ್ಪ ಸಿಂಗನಾಳ, ತಿಪ್ಪೇ ರುದ್ರಸ್ವಾಮಿ, ಮನೋಹರಗೌಡ, ವೀರೇಶ ಬಲಕುಂದಿ, ರಾ ಮನಾಯ್ಕ, ನಾಗರಾಜ ಚಳಗೇರಿ, ಪಂಪಣ್ಣ ನಾಯಕ, ವಿ ರುಪಾಕ್ಷಗೌಡ ನಾಯಕ, ಟಿ.ಜಿ.ಬಾಬು, ಪ್ರಸಾದ, ಬಸವಂ ತ ಪಾಟೀಲ, ಮಂಜುನಾಥ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.