ಮುನಿರಾಬಾದ್: ಇಲ್ಲಿನ ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ಈಚೆಗೆ ನಡೆದ ರಾಜ್ಯಮಟ್ಟದ ಫುಟ್ಬಾಲ್ ನಲ್ಲಿ ಜಯಗಳಿಸಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ಗಂಗಾವತಿಯ ಎಚ್.ಆರ್. ಸರೋಜಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ಕೊಪ್ಪಳ ಜಿಲ್ಲಾಮಟ್ಟದ ಪಂದ್ಯದಲ್ಲಿ ತಂಡ ಆಯ್ಕೆಯಾಗಿದೆ. ಕವಿತಾ, ಭೂಮಿಕಾ, ಕಾವ್ಯ, ಆಶಾ, ಗೀತಾ, ವಿಶಾಲ, ಕಾವೇರಿ, ಅನ್ನಪೂರ್ಣ, ಗೀತಾ, ಅನಿತಾ, ಸಂಜನಾ ನಾಯಕ್, ಐಶ್ವರ್ಯ, ನಂದಿನಿ, ಶ್ರೇಯಾ, ನಾಗವೇಣಿ, ಸಂಜನಾ ಎಸ್., ಪವಿತ್ರಾ ಮತ್ತು ಈ.ನಂದಿತಾ ತಂಡದಲ್ಲಿದ್ದರು. ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಣೆಕಲ್ ಮಹಾಂತೇಶ ಹಾಗೂ ಕಾಲೇಜು ಆಡಳಿತ ಮಂಡಳಿಯ ಸದಸ್ಯರು, ಕಾಲೇಜಿನ ಪ್ರಾಚಾರ್ಯ ಬಸವರಾಜ, ದೈಹಿಕ ಶಿಕ್ಷಣ ಉಪನ್ಯಾಸಕ ತಿರುಪತಿ ನಾಯಕ್ ವಿಜೇತರನ್ನು ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.