ADVERTISEMENT

ಹನುಮಸಾಗರ: ಸಮೀಕ್ಷೆ ನಿರಾತಂಕ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 5:13 IST
Last Updated 27 ಸೆಪ್ಟೆಂಬರ್ 2025, 5:13 IST
ಹನುಮಸಾಗರದಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆ ಕುಷ್ಟಗಿ ತಹಶೀಲ್ದಾರ್ ಅಶೋಕ್ ಶಿಗ್ಗಾಂವಿ ಸಮೀಕ್ಷೆಯನ್ನು ಪರಿಶೀಲಿಸಿದರು
ಹನುಮಸಾಗರದಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆ ಕುಷ್ಟಗಿ ತಹಶೀಲ್ದಾರ್ ಅಶೋಕ್ ಶಿಗ್ಗಾಂವಿ ಸಮೀಕ್ಷೆಯನ್ನು ಪರಿಶೀಲಿಸಿದರು   

ಹನುಮಸಾಗರ: ತಾಲ್ಲೂಕಿನಲ್ಲಿ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ವೇಗವಾಗಿ ಸಾಗುತ್ತಿದ್ದು ಗ್ರಾಮೀಣ ಪ್ರದೇಶಗಳ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಶುಕ್ರವಾರವಾದ ನಾಲ್ಕನೇ ದಿನವೂ ಸಮೀಕ್ಷೆ ಚುರುಕುವಾಗಿ ನಡೆಯಿತು.

ತಹಶೀಲ್ದಾರ್ ಮನೆ ಮನೆಗೆ ತೆರಳಿ ಸಮೀಕ್ಷಕರ ಕಾರ್ಯ ವೀಕ್ಷಿಸಿದರು.

‘ಸಮೀಕ್ಷೆಗೆ ಜನರು ಉತ್ಸಾಹದಿಂದ ಸಹಕರಿಸುತ್ತಿರುವುದು ಶ್ಲಾಘನೀಯ. ಈ ರೀತಿಯ ಸಹಭಾಗಿತ್ವವು ಮುಂದಿನ ಅಭಿವೃದ್ಧಿಗೆ ದಾರಿಯಾಗಿದೆ’ ಕುಷ್ಟಗಿ ತಹಶೀಲ್ದಾರ ಅಶೋಕ ಶಿಗ್ಗಾಂವಿ ಅಭಿಪ್ರಾಯಪಟ್ಟರು.

‘ಗ್ರಾಮ ಪಂಚಾಯಿತಿಗಳು ಮತ್ತು ಸ್ಥಳೀಯ ಆಡಳಿತದಿಂದ ನಡೆದ ಜಾಗೃತಿ ಅಭಿಯಾನ ಫಲಶ್ರುತಿಯಾಗಿ ಜನ ಅಗತ್ಯ ದಾಖಲೆಗಳನ್ನು ಸಿದ್ಧವಾಗಿ ಇಟ್ಟುಕೊಂಡಿದ್ದಾರೆ. ಮನೆಗೆ ಭೇಟಿ ನೀಡುತ್ತಿದ್ದಂತೆಯೇ ಅವರು ಸ್ಪಂದಿಸುತ್ತಿರುವುದು ಸಮೀಕ್ಷೆಗೆ ವೇಗ ನೀಡುತ್ತಿದೆ’ ಎಂದು ಸಮೀಕ್ಷಕರು ಪ್ರಜಾವಾಣಿಗೆ ಮಾಹಿತಿ ನೀಡಿದರು.

ಮಳೆ ಸೇರಿ ಇತ್ಯಾದಿ ಸವಾಲುಗಳ ನಡುವೆಯೂ ಸಮೀಕ್ಷಕರು ಉತ್ಸಾಹದಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಶರಣಯ್ಯ, ಅಭಿಷೇಕ, ಲೇಂಕಪ್ಪ, ವೀರನಗೌಡ ಸ್ಥಳದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.