ADVERTISEMENT

ಸಹಾಯ ಮಾಡುವ ಪ್ರವೃತ್ತಿ ಇರಲಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 4:18 IST
Last Updated 28 ನವೆಂಬರ್ 2022, 4:18 IST
ಕೊಪ್ಪಳದಲ್ಲಿ ಶನಿವಾರ ಉಚಿತ ಕೃತಕ ಕಾಲು ಜೋಡಣೆ ಶಿಬಿರವನ್ನು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹಾಗೂ ಅತಿಥಿಗಳು ಉದ್ಘಾಟಿಸಿದರು
ಕೊಪ್ಪಳದಲ್ಲಿ ಶನಿವಾರ ಉಚಿತ ಕೃತಕ ಕಾಲು ಜೋಡಣೆ ಶಿಬಿರವನ್ನು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹಾಗೂ ಅತಿಥಿಗಳು ಉದ್ಘಾಟಿಸಿದರು   

ಕೊಪ್ಪಳ: ‘ಪ್ರತಿ ಮನುಷ್ಯ ಕೈಲಾದಷ್ಟು ಸಹಾಯ ಮಾಡುವ ಪ್ರವೃತ್ತಿ ಬೆಳಸಿಕೊಳ್ಳಬೇಕು’ ಎಂದು ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಜೈಪುರದ ಭಗವಾನ ಮಹಾವೀರ ವಿಕಲಾಂಗ ಸಾಹಿತ್ಯ ಸಂಸ್ಥೆ ಹಾಗೂ ರಾಯಚೂರಿನ ಆರ್.ಕೆ.ಬಿ. ಫೌಂಡೇಷನ್‌ ಸಹಯೋಗದಲ್ಲಿ ಶನಿವಾರ ಎಸ್.ಎಸ್ ಸ್ಥಾನಿಕ ಜೈನ ಸಮುದಾಯ ಭವನದಲ್ಲಿ ನಡೆದ ಉಚಿತ ಕೃತಕ ಕಾಲು ಜೋಡಣೆ ಶಿಬಿರ ಹಾಗೂ ಅಂಗವಿಕಲರಿಗೆ ಸಲಕರಣೆಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೀಪ ತನ್ನನ್ನು ತಾನು ಸುಟ್ಟುಕೊಂಡು ಜಗತ್ತಿಗೆ ಬೆಳಕು ನೀಡುತ್ತದೆ. ಬಹಳಷ್ಟು ಹಣ, ಅಂತಸ್ತು ಇದ್ದರೇನು ಫಲ? ದೀನ, ದಲಿತ, ಬಡವರಿಗೆ ದಾನ ಮಾಡುವ ಮನಸ್ಸು ಹೊಂದಿರಬೇಕು’ ಎಂದರು.

ADVERTISEMENT

ಲಯನ್ಸ್ ಕಣ್ಣಿನ ಆಸ್ಪತ್ರೆ ಚೇರ್ಮನ್‌ ಅಭಯಕುಮಾರ ಮೆಹತಾ, ಮಾಜಿ ಶಾಸಕ ಬಸವರಾಜ ಹಿಟ್ನಾಳ, ಲಯನ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜವಾಹರಲಾಲ್ ಜೈನ್, ರಾಯಚೂರಿನ ಆರ್.ಕೆ.ಬಿ. ಫೌಂಡೇಷನ್‌ ಮುಖ್ಯಸ್ಥ ಸೌಭಾಗ್ಯರಾಜ ಬಂಡಾರಿ, ವಿಕಲಚೇತನ ಅಧಿಕಾರಿ ಕೃಷ್ಣಾ ಬಾಕಳೆ, ಲಯನ್ಸ್ ಕ್ಲಬ್ ಅಧ್ಯಕ್ಷ ಗವಿಸಿದ್ದಪ್ಪ ಮುದಗಲ್ಲ, ಖಜಾಂಚಿ ಮಲ್ಲಣ್ಣ ಬಳ್ಳೂಳ್ಳಿ, ಉದ್ಯಮಿ ಶ್ರೀನಿವಾಸ ಗುಪ್ತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.