ADVERTISEMENT

ಕುಷ್ಟಗಿಯಲ್ಲಿ ಐನೊಕ್ಸ್ ವಿಂಡ್‌ ₹400 ಕೋಟಿ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 7:28 IST
Last Updated 16 ಅಕ್ಟೋಬರ್ 2025, 7:28 IST
Shwetha Kumari
   Shwetha Kumari

ಕುಷ್ಟಗಿ: ತಾಲ್ಲೂಕಿನಲ್ಲಿ 70 ಎಕರೆ ಪ್ರದೇಶದಲ್ಲಿ ವಿಂಡ್ ಬ್ಲೇಡ್ ಉತ್ಪಾದನಾ ಘಟಕ ಸ್ಥಾಪನೆ ಮಾಡಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

ಈ ಕುರಿತು ಅವರು ಸಾಮಾಜಿಕ ತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು ‘ಪವನ ವಿದ್ಯುತ್ ಉತ್ಪಾದನೆಯಲ್ಲಿ ಅಗತ್ಯವಾದ ಬೃಹತ್ ಬ್ಲೇಡ್ ಹಾಗೂ ಗಾಳಿಗೋಪುರಗಳನ್ನು ನಿರ್ಮಿಸುವ ಕಾರ್ಯದಲ್ಲಿ ಐನೋಕ್ಸ್‌ ವಿಂಡ್‌ ಸಂಸ್ಥೆ ಹೆಸರಾಗಿದೆ. ಕಂಪನಿಯ ಕಾರ್ಪೊರೇಟ್ ಕಾರ್ಯತಂತ್ರ ವಿಭಾಗದ ಅಧ್ಯಕ್ಷ ಸಂತೋಷ್ ಖೈರ್ನಾರ್ ಅವರು ನನ್ನನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಕುಷ್ಟಗಿ ತಾಲ್ಲೂಕಿನ ಕ್ಯಾದಿಗುಪ್ಪದ ಕೆಐಎಡಿಬಿಯ ಸುಮಾರು 70 ಎಕರೆ ವಿಸ್ತೀರ್ಣದಲ್ಲಿ ಪವನ ಬ್ಲೇಡ್ ಉತ್ಪಾದನಾ ಘಟಕ ನಿರ್ಮಾಣ ಮಾಡಲು ಆಸಕ್ತಿ ತೋರಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

‘ಆರಂಭದಲ್ಲಿ ಸುಮಾರು ₹300 ಕೋಟಿ ಹೂಡಿಕೆ ಮಾಡಿ, ನಂತರದಲ್ಲಿ ಹೆಚ್ಚುವರಿಯಾಗಿ ₹100 ಕೋಟಿ ಹೂಡಿಕೆಯೊಂದಿಗೆ ಗಾಳಿಗೋಪುರಗಳ ನಿರ್ಮಾಣ ಚಟುವಟಿಕೆಗಳನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ. ಅವರಿಗೆ ನಮ್ಮ ಸರ್ಕಾರದ ಸಂಪೂರ್ಣ ಸಹಕಾರ ಮತ್ತು ಅಗತ್ಯದ ಎಲ್ಲ ನೆರವನ್ನು ನೀಡುತ್ತೇವೆ. ಶೀಘ್ರದಲ್ಲೇ ಐನಾಕ್ಸ್ ಸಂಸ್ಥೆಯವರು ತಮ್ಮ ಕಾರ್ಯ ಚಟುವಟಿಕೆ ಆರಂಭಿಸುವ ಭರವಸೆಯಿದೆ’ ಎಂದು ಹೇಳಿದ್ದಾರೆ.

ADVERTISEMENT