
ಕೊಪ್ಪಳ: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆಗೆ ವಿರೋಧಿಸಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಅನಿರ್ದಿಷ್ಟ ಹೋರಾಟ ಶನಿವಾರ 58 ದಿನಗಳನ್ನು ಪೂರ್ಣಗೊಳಿಸಿತು.
ಭಾಗ್ಯನಗರದ ಡಾ. ಬಿ.ಆರ್. ಅಂಬೇಡ್ಕರ್ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಶಿವಲಿಂಗಪ್ಪ ವಣಗೇರಿ ಮಾತನಾಡಿ 'ನಗರ ಬೆಳೆದರೆ ಜನರು ನಗರದಲ್ಲಿ ಓಡಾಡುತ್ತಾರೆ. ನಗರದ ಸುತ್ತ ಈಗ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಗರ ಬಡಿದಿದೆ. ನಿವೃತ್ತಿ ಜೀವನ ಇಲ್ಲಿ ಕಳೆಯಬೇಕು ಎನ್ನುವವರಿಗೆ ಸುಖವಿಲ್ಲದಂತಾಗಿದೆ. ನಗರಕ್ಕೆ ಭವಿಷ್ಯವಿಲ್ಲವಾದರೆ ಯಾರು ಬರುತ್ತಾರೆ’ ಎಂದು ಪ್ರಶ್ನಿಸಿದರು.
'ಧರಣಿಗೆ ಬೆಂಬಲಿಸಲು ಖ್ಯಾತ ವಿಮರ್ಶಕ ರಹಮತ್ ತರೀಕೆರೆ ಅವರು ಡಿ. 30ರಂದು ಬರುವರು’ ಎಂದು ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ಹೋರಾಟದಲ್ಲಿ ಕವಯಿತ್ರಿ ಪುಷ್ಪಲತಾ ಏಳುಭಾವಿ, ಸಾಹಿತಿ ಎ.ಎಂ.ಮಾದರಿ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಪುಸ್ತಕ ಪ್ರಕಾಶಕ ಡಿ.ಎಂ.ಬಡಿಗೇರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.