ADVERTISEMENT

ಕೊಪ್ಪಳ: ಜ. 27ರಿಂದ ಗವಿಮಠದ ಜಾತ್ರೆ, ಸುತ್ತೂರು ಶ್ರೀಗಳಿಂದ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 12:58 IST
Last Updated 8 ಜನವರಿ 2024, 12:58 IST
ಗವಿಮಠದ ಜಾತ್ರೆಯ 2024ರ ಲಾಂಛನ
ಗವಿಮಠದ ಜಾತ್ರೆಯ 2024ರ ಲಾಂಛನ   

ಕೊಪ್ಪಳ: ಪ್ರತಿ ವರ್ಷ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಇಲ್ಲಿನ ಪ್ರಸಿದ್ಧ ಗವಿಮಠದ ಜಾತ್ರಾ ಮಹೋತ್ಸವ ಜ. 27ರಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಮೈಸೂರಿನ ಸುತ್ತೂರು ಕ್ಷೇತ್ರದ ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡುವರು.

ಅಂದು ಸಂಜೆ 6 ಗಂಟೆಗೆ ಗವಿಮಠದ ಮುಂಭಾಗದಲ್ಲಿರುವ ಕೈಲಾಸ ಮಂಟಪದಲ್ಲಿ ಜಾತ್ರೆಗೆ ಚಾಲನೆ ಲಭಿಸಲಿದೆ. ಜಮಖಂಡಿಯ ಓಲೇಮಠದ ಅಭಿನವ ಕುಮಾರ ಚನ್ನಬಸವ ಸ್ವಾಮೀಜಿ ಹಾಗೂ ಕೊಪ್ಪಳ ತಾಲ್ಲೂಕಿನ ಹಿರೇಸಿಂಧೋಗಿಯ ಕಪ್ಪತ್ತೇಶ್ವರ ಮಠದ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸೋಮವಾರ ತಿಳಿಸಿದ್ದಾರೆ.

ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಘ್‌, ಚಂದ್ರಯಾನ್‌–3 ಯೋಜನಾ ನಿರ್ದೇಶಕ ಪಿ. ವೀರಮುತ್ತುವೇಲ್‌, ಬೆಂಗಳೂರಿನ ಅದಮ್ಯ ಚೇತನ ಫೌಂಡೇಷನ್‌ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಪಾಲ್ಗೊಳ್ಳುವರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.