
ಪ್ರಜಾವಾಣಿ ವಾರ್ತೆ
ಆನಂದ ಪೊಲೀಸ್ ಪಾಟೀಲ್
ಕುಕನೂರು (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಚಿಕ್ಕಬಿಡನಾಳ ಗ್ರಾಮದಲ್ಲಿ ಮದ್ಯ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಎದೆಗೆ ನಾಡ ಬಂದೂಕಿನಿಂದ ಫೈರಿಂಗ್ ಮಾಡಿಕೊಂಡಿದ್ದು, ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
29 ವರ್ಷದ ಆನಂದ ಪೊಲೀಸ್ ಪಾಟೀಲ್ ಫೈರಿಂಗ್ ಮಾಡಿಕೊಂಡವರು. ಆನಂದ ತನ್ನ ಪತ್ನಿ, ತಾಯಿ ಮತ್ತು ತಂದೆಯಿಂದ ದೂರವಾಗಿ ಹೊಲದ ತಗಡಿನ ಮನೆಯಲ್ಲಿ ವಾಸವಾಗಿದ್ದನು.
ಭಾನುವಾರ ರಾತ್ರಿ ಹೊಲದ ಮನೆಯಲ್ಲಿ ಫೈರಿಂಗ್ ಮಾಡಿಕೊಂಡಿದ್ದು, ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದರಿಂದ ಕುಕನೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.