ADVERTISEMENT

ನಾಯಕತ್ವ ಬದಲಾವಣೆ | ನಾನು ಎಲ್ಲರಿಗೂ ಆಪ್ತ, ಬಣ ರಾಜಕಾರಣವಿಲ್ಲ: ಶಾಸಕ ಹಿಟ್ನಾಳ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 12:52 IST
Last Updated 21 ನವೆಂಬರ್ 2025, 12:52 IST
<div class="paragraphs"><p>ಹಿಟ್ನಾಳ</p></div>

ಹಿಟ್ನಾಳ

   

ಕೊಪ್ಪಳ: ’ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಇಬ್ಬರೂ ಆಪ್ತರೇ ಆಗಿದ್ದಾರೆ. ನಮ್ಮಲ್ಲಿ ಯಾವುದೇ ಬಣ ರಾಜಕಾರಣವಿಲ್ಲ. ನಮ್ಮಲ್ಲಿರುವುದು ಕಾಂಗ್ರೆಸ್‌ ಬಣ ಮಾತ್ರ’ ಎಂದು ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ಡಿ.ಕೆ. ಶಿವಕುಮಾರ್ ಬೆಂಬಲಿಗರು ದೆಹಲಿಗೆ ಹೋಗಿದ್ದಾರಲ್ಲ ಎನ್ನುವ ಪ್ರಶ್ನೆಗೆ ‘ಅದನ್ನೆಲ್ಲ ಗಮನಿಸಲು ಹೈಕಮಾಂಡ್‌ ಹಾಗೂ ರಾಜ್ಯದ ನಾಯಕರು ಇದ್ದಾರೆ. ಒಳ್ಳೆಯ ತೀರ್ಮಾನ ಕೈಗೊಳ್ಳುತ್ತಾರೆ. ನಾಲ್ಕು ದಿನ ನಾನೂ ದೆಹಲಿಯಲ್ಲಿದ್ದೆ. ಏನೂ ಆಗುವುದಿಲ್ಲವೆಂದು ಕೊಂಡಿದ್ದೇನೆ. ಏನಾದರೂ ಬೆಳವಣಿಗೆ ಇದ್ದರೆ ಹೈಕಮಾಂಡ್‌ನವರೇ ಹೇಳುತ್ತಾರೆ’ ಎಂದು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಕಾಂಗ್ರೆಸ್‌ ಪಕ್ಷದಲ್ಲಿ ಒಗ್ಗಟ್ಟಿದೆ. ಚಾಮರಾಜನಗರದಲ್ಲಿ ಖುದ್ದು ಮುಖ್ಯಮಂತ್ರಿಯೇ ಇದನ್ನು ಸ್ಪಷ್ಟಪಡಿಸಿದ್ದರೂ ಅನಗತ್ಯ ವಿವಾದ ಯಾಕೆ’ ಎಂದು ಪ್ರಶ್ನಿಸಿದ ಅವರು ‘ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.