ADVERTISEMENT

ಹಿಂದಿನ ಅವಧಿಯ ಲೋಪದೋಷ ಸರಿಪಡಿಸುವೆ: ರಾಬಕೊವಿ ನೂತನ ಅಧ್ಯಕ್ಷ ಹಿಟ್ನಾಳ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 14:32 IST
Last Updated 25 ಜುಲೈ 2025, 14:32 IST
<div class="paragraphs"><p>ಗವಿಮಠಕ್ಕೆ ಭೇಟಿ ನೀಡಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದ&nbsp;ಹಿಟ್ನಾಳ</p></div>

ಗವಿಮಠಕ್ಕೆ ಭೇಟಿ ನೀಡಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದ ಹಿಟ್ನಾಳ

   

ಕೊಪ್ಪಳ: ’ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಹಾಲು ಒಕ್ಕೂಟ ನಷ್ಟದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಹಿಂದಿನ ಅವಧಿಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿ ಲಾಭದತ್ತ ಕೊಂಡೊಯ್ಯುವೆ’ ಎಂದು ಒಕ್ಕೂಟದ ನೂತನ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ ಹೇಳಿದರು.

ನಗರದಲ್ಲಿ ಶುಕ್ರವಾರ ಗವಿಮಠಕ್ಕೆ ಭೇಟಿ ನೀಡಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ ‘15 ದಿನಗಳಲ್ಲಿ ಸಭೆ ನಡೆಸಿ ಬಳ್ಳಾರಿಗೆ ಮಂಜೂರಾಗಿರುವ ಮೆಗಾ ಡೈರಿ ಆರಂಭಿಸಲು ಕ್ರಮ ವಹಿಸುವೆ. ನಿರ್ದೇಶಕರ ಒತ್ತಾಯದಿಂದ ಸಹಕಾರಿ ಕ್ಷೇತ್ರಕ್ಕೆ ಬರಬೇಕಾಯಿತು.’ ಎಂದು ಹೇಳಿದರು.

ADVERTISEMENT

’ಈ ಬಾರಿಯ ನಿರ್ದೇಶಕ ಸ್ಥಾನ ರಾಯಚೂರು ಅಥವಾ ಕೊಪ್ಪಳ ಜಿಲ್ಲೆಗೆ ಕೊಡಬೇಕು ಎಂದು ನಾನು ಮೊದಲು ಮನವಿ ಮಾಡಿದ್ದೆ. ಆದರೆ ಹಿಂದಿನ ಅಧ್ಯಕ್ಷರು ದಮ್ಮು ಹಾಗೂ ತಾಕತ್ತಿನ ಬಗ್ಗೆ ಮಾತನಾಡಿದ್ದರು. ಅದೇನೇ ಇರಲಿ; ಈಗ ಅಂದುಕೊಂಡಿದ್ದನ್ನು ಮಾಡಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.