
ಕಾರಟಗಿ: ಮೌನೇಶ್ವರ ಜಯಂತ್ಯುತ್ಸವವನ್ನು ಮಂಗಳವಾರ ವಿಶ್ವಕರ್ಮ ಸಮಾಜದವರ ನೇತೃತ್ವದಲ್ಲಿ ಸಂಭ್ರಮದೊಂದಿಗೆ ಆಚರಿಸಲಾಯಿತು.
ಪಟ್ಟಣದ 1ನೇ ವಾರ್ಡ್‌ನಲ್ಲಿರುವ ದೇವಸ್ಥಾನದಲ್ಲಿ ಬೆಳಿಗ್ಗೆ ಅರ್ಚಕ ನಾಗಲಿಂಗಾಚಾರ್ಯ ನೇತೃತ್ವದಲ್ಲಿ ದ್ವಜಾರೋಹಣದ ಬಳಿಕ ಮೌನೇಶ್ವರಗೆ ವಿಶೇಷ ಪೂಜೆ, ಅರ್ಚನೆ, ಅಲಂಕಾರ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಪಟ್ಟಣದ ಪುರಸಭೆ ಬಳಿಯ ತುಂಗಭದ್ರಾ 31ನೇ ವಿತರಣಾ ನಾಲೆಯ ಬಳಿ ಗಂಗಾಪೂಜೆ ಸಲ್ಲಿಸಿ, ಮೌನೇಶ್ವರರ ಭಾವಚಿತ್ರದೊಂದಿಗೆ ಮೆರವಣಿಗೆ ಆರಂಭಗೊಂಡಿತು. ಪೂರ್ಣಕುಂಭ, ಕಳಸ ಹೊತ್ತ ಮಹಿಳೆಯರು, ವಾದ್ಯಮೇಳ, ಸಮಾಜದವರ ಪಾಲ್ಗೊಳ್ಳುವಿಕೆಯು ಮೆರವಣಿಗೆಯ ಕಳೆ ಹೆಚ್ಚಿಸಿದ್ದವು. ಡೊಳ್ಳು, ತಾಶಾ ಸದ್ದಿಗೆ ಯುವಕರು ಹೆಜ್ಜೆ ಹಾಕಿದರು.
ಮೆರವಣಿಗೆಯು ರಾಜ್ಯ ಹೆದ್ದಾರಿ, ಕನಕದಾಸ ವೃತ್ತ, ಶರಣಬಸವೇಶ್ವರರ ಮಹಾದ್ವಾರದ, ಡಾ.ರಾಜಕುಮಾರ ಕಲಾ ಮಂದಿರ ಮಾರ್ಗವಾಗಿ ದೇವಸ್ಥಾನ ತಲುಪಿತು.
ಮೆರವಣಿಗೆಯುದ್ದಕ್ಕೂ ವಿವಿಧ ಸಮುದಾಯಗಳ ಪ್ರಮುಖರು, ಮುಖಂಡರುಗಳು ಮೌನೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಕಿ ನಮಿಸಿದರು. ಆಗಮಿಸಿದ್ದ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ ಕಟ್ಟಡಕ್ಕೆ ಬಣ್ಣ ಹಚ್ಚಿದ್ದ ನೀಲಮೂರ್ತಿಗೆ ವಿಶ್ವಕರ್ಮ ಸಮಾಜದ ಮುಖಂಡರು ಸನ್ಮಾನಿಸಿದರು.
ವಿಶ್ವಕರ್ಮ ಸಮಾಜದ ಜಿಲ್ಲಾ ಉಪಾಧ್ಯಕ್ಷ ವೀರೇಶ ಪತ್ತಾರ, ತಾಲ್ಲೂಕಾಧ್ಯಕ್ಷ ಸೂಗೂರೇಶ ವಿಶ್ವಕರ್ಮ, ಸಂಘಟನಾ ಕಾರ್ಯದರ್ಶಿ ಕಾಳಪ್ಪ ಬಡಿಗೇರ, ಕಾರ್ಯದರ್ಶಿ ಹನುಮೇಶ ಟಿವಿ, ನಗರ ಘಟಕದ ಅಧ್ಯಕ್ಷ ವೀರಭದ್ರಪ್ಪ ಬಡಿಗೇರ, ಯುವ ಘಟಕದ ಅಧ್ಯಕ್ಷ ಹನುಮಂತ ವಡ್ರಕಲ್, ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ ಬಸವೇಶ್ವರ ನಗರ ಪ್ರಮುಖರಾದ ಶ್ರೀಶೈಲ ಬಡಿಗೇರ, ಭೀಮೇಶ ಬಡಿಗೇರ, ನಾಗರಾಜ್ ಚನ್ನಳ್ಳಿ, ಮೌನೇಶ ಬಡಿಗೇರ, ಶ್ರೀಶೈಲಪ್ಪ ಬೂದಗುಂಪಾ, ಪಂಪಾಪತಿ, ಬಸವರಾಜ್ ಪನ್ನಾಪುರ, ಮೌನೇಶ ಬೇವಿನಾಳ, ಭಾಸ್ಕರ್ ಯರಡೋಣಾ, ಪುರುಷೋತ್ತಮ ನವಲಿ, ಆಂಜನೇಯ ಉಳೇನೂರು, ದೇವೇಂದ್ರಪ್ಪ ಉಳೇನೂರು, ನಾಗೇಶ ಬಡಿಗೇರ ಕಾರಟಗಿ, ಹನುಮಂತಪ್ಪ ಮೈಲಾಪುರ, ಉಷಾ, ಪೂಜಾ, ಮಹೇಶ್ವರಿ, ಸವಿತಾ, ಶ್ರೀದೇವಿ, ಅಂಬಮ್ಮ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.