ಕೊಪ್ಪಳ: ’ಅಂಗವಿಕಲರು ಕೃತಕ ಕಾಲು ಜೋಡಣೆ ಮಾಡಿಕೊಂಡು ಸ್ವಾವಲಂಬಿ ಬದುಕಿನ ಹಾದಿಗೆ ಹೊರಳಬೇಕು. ಎಲ್ಲರೂ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಹೇಳಿದರು.
ನಗರದ ಶಾದಿಮಹಲ್‌ನಲ್ಲಿ ಗುರುವಾರ ಎಂಎಸ್‌ಪಿಎಲ್ ಮತ್ತು ಜೈಪುರದ ಭಗವಾನ್ ಮಹಾವೀರ್ ಅಂಗವಿಕಲರ ಸಹಕಾರ ಸಮಿತಿಯ ಆಶ್ರಯದಲ್ಲಿ ನಡೆದ ಕೃತಕ ಕಾಲು ಜೋಡಣೆ ಕಾರ್ಯಕ್ರಮದಲ್ಲಿ ಮಾತನಾಡಿ ‘ಭಗವಾನ್ ಮಹಾವೀರ್ ಸಮಿತಿ ಹತ್ತು ಲಕ್ಷಕ್ಕೂ ಹೆಚ್ಚು ಕೃತಕ ಅಂಗಾಂಗ ಜೋಡಣೆ ಮಾಡುತ್ತಿದ್ದಾರೆ. ಅಂಗವಿಕಲರ ಬದುಕಿಗೆ ಇದು ವರದಾನವಾಗಿದೆ’ ಎಂದು ಹೇಳಿದರು.
ಬಲ್ಡೋಟಾ ಕಂಪನಿ ಚೇರ್ಮನ್ ನರೇಂದ್ರಕುಮಾರ ಎ. ಬಲ್ಡೋಟಾ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ, ನಗರಸಭೆ ಪೌರಾಯುಕ್ತ ಸುರೇಶ ಬಬಲಾದ, ಗ್ರೇಡ್-2 ತಹಶೀಲ್ದಾರ್ ಗವಿಸಿದ್ದಪ್ಪ ಮಣ್ಣೂರು, ಬೆಂಗಳೂರಿನ ಅನಿಲ ಸುರಾನಾ ಇದ್ದರು.
‘ಕಂಪನಿ ವತಿಯಿಂದ ಹೊಸಪೇಟೆಯಲ್ಲಿ ಹತ್ತು ಬಾರಿ ಶಿಬಿರ ನಡೆಸಲಾಗಿದ್ದು, ಸುಮಾರು 2,615ಕ್ಕೂ ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ’ ಎಂದು ಕಂಪನಿಯ ಪ್ರತಿನಿಧಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.