ADVERTISEMENT

ಕನಕಗಿರಿ: ಪೀರ ದೇವರ ಹೊತ್ತು ಮಂಡಿಗಾಲಿನಲ್ಲಿ ನಡಿಗೆ!

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 6:39 IST
Last Updated 19 ಆಗಸ್ಟ್ 2022, 6:39 IST
ಕನಕಗಿರಿಯ ಇಂದಿರಾನಗರ ಕಾಲೊನಿಯಲ್ಲಿ ಗುರುವಾರ ಕವಡಿಪೀರ ದೇವರ ಹೊತ್ತ ಮುಜಾವರ ಅವರು ಮಂಡಿಗಾಲಿನಲ್ಲಿ ನಡೆದರು
ಕನಕಗಿರಿಯ ಇಂದಿರಾನಗರ ಕಾಲೊನಿಯಲ್ಲಿ ಗುರುವಾರ ಕವಡಿಪೀರ ದೇವರ ಹೊತ್ತ ಮುಜಾವರ ಅವರು ಮಂಡಿಗಾಲಿನಲ್ಲಿ ನಡೆದರು   

ಕನಕಗಿರಿ: ಮೊಹರಂ ಹಬ್ಬದ ನಂತರ ಸಮಾನ ಮನಸ್ಕ ಗೆಳೆಯರು, ಯುವಕರು ಕೂಡಿಕೊಂಡು ಆಚರಿಸುವ ಕವಡಿ ಪೀರ ದೇವರ ವಿಸರ್ಜನೆ ಕಾರ್ಯಕ್ರಮ ಗುರುವಾರ ಪಟ್ಟಣದಲ್ಲಿ ಸಂಭ್ರಮದಿಂದ ವಿಜೃಂಭಣೆಯಿಂದ ನಡೆಯಿತು.

ಪಟ್ಟಣದ ವಿವಿಧ ಮಸೀದಿ, ಓಣಿಗಳಲ್ಲಿ ಪ್ರತಿಷ್ಠಾಪಿಸಿದ್ದ ಕವಡಿ ಪೀರ ದೇವರ ಖತ್ತಲ್ ರಾತ್ರಿಯನ್ನು ಬುಧವಾರ ರಾತ್ರಿ ಆಚರಿಸಲಾಯಿತು.

ಗುರುವಾರ ಬೆಳಿಗ್ಗೆ ಹರಕೆ ಹೊತ್ತ ಮನೆಗಳಿಗೆ ತೆರಳಿದ ದೇವರಿಗೆ ಭಕ್ತರು ಸಕ್ಕರೆ, ಸಿಹಿ ಖಾದ್ಯ, ಹೂವು ಸಮರ್ಪಿಸಿದರು.

ADVERTISEMENT

ಒಂದನೇಯ ವಾರ್ಡ್‌ನಲ್ಲಿ ಪ್ರತಿಷ್ಠಾಪಿಸಿದ್ದ ಕವಡಿ ಪೀರ ದೇವರ ಮುಜಾವರು ಅರ್ಧ ಕಿಮೀ ದೂರ ಮಂಡಿಗಾಲಿನಲ್ಲಿ ನಡೆದು ಗಮನ ಸೆಳೆದರು.

ಸಾವಿರಾರು ಸಂಖ್ಯೆಯ ಭಕ್ತರು ಈ ದೃಶ್ಯ ನೋಡಲು ಲಿಂಗಸೂರು-ಗಂಗಾವತಿ ರಸ್ತೆಯಲ್ಲಿ ನಿಂತು ವೀಕ್ಷಿಸಿದರು. ಈ ವೇಳೆ ರಸ್ತೆಯಲ್ಲಿ ಜನ ಜಂಗುಳಿ ಇದ್ದರಿಂದ ಬಸ್ ಇತರೆ ವಾಹನಗಳು ಕೆಲ ಸಮಯ ಹಳೆ ತಾವರಗೇರಾ ರಸ್ತೆ ಮೂಲಕ ಸಂಚರಿಸಿದವು.

ಪ್ರವಾಸಿ ಮಂದಿರದ ಹಳ್ಳದ ಪರಿಸರದಲ್ಲಿ ವಿಸರ್ಜನೆಗೆ ತೆರಳಿದವು. ಹಲಗಿ, ಹೆಜ್ಜೆ ಮೇಳ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.