ಹನುಮಸಾಗರ: ಇಲ್ಲಿನ ಸಮೃದ್ಧಿ ಪಾಟೀಲ ಅಪರೂಪದ ಪ್ರತಿಭೆಯ ಮೂಲಕ ದೇಶದಾದ್ಯಂತ ಪ್ರಖ್ಯಾತಿ ಗಳಿಸಿದ್ದಾರೆ.
2024ರ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸಮೃದ್ಧಿ ಹೆಸರು ದಾಖಲಿಸಿಕೊಂಡಿದ್ದಾಳೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಚಿತ್ರ ಗುರುತಿಸುವ ಅಪರೂಪದ ಸಾಧನೆಯ ಕಾರಣಕ್ಕೆ ಈ ಗೌರವ ದೊರಕಿದೆ. ಹಲವು ಕ್ಷೇತ್ರಗಳಲ್ಲಿ ಸಮೃದ್ಧಿ ಪ್ರತಿಭೆ ಮೆರೆದಿರುವುದು ಗಮನಾರ್ಹವಾಗಿದೆ.
ಸಮೃದ್ಧಿ, ಸಿರಿಗನ್ನಡ ಸ್ವರ ಸಂಗೀತ ಪಾಠ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ಪಾಠ ಶಾಲೆಯ ಪ್ರೋತ್ಸಾಹ ತಮ್ಮ ಸಾಧನೆಗೆ ಮೂಲ ಕಾರಣವೆಂದು ಅವರು ಹೇಳುತ್ತಾರೆ. ಸಂಗೀತದಲ್ಲಿಯೂ ಅಸಾಮಾನ್ಯ ಪ್ರತಿಭೆ ಪ್ರದರ್ಶಿಸುತ್ತಿರುವ ಅವರು ಗುರುಗಳಿಗೆ ಕೃತಜ್ಞರಾಗಿದ್ದಾರೆ.
ತಾಯಿಯ ಮಾರ್ಗದರ್ಶನದಲ್ಲಿ ಪ್ರಗತಿ: ಸಮೃದ್ಧಿಯ ಈ ಯಶಸ್ಸಿನ ಹಿಂದಿರುವ ಪ್ರಮುಖ ವ್ಯಕ್ತಿ ಅವರ ತಾಯಿ ಸುಜಾತಾ ಪಾಟೀಲ. ಅವರು ಸಮೃದ್ಧಿಗೆ ಶ್ರದ್ಧೆ ಮತ್ತು ಸತತ ಅಭ್ಯಾಸದ ಮಹತ್ವ ತಿಳಿಸಿದ್ದಾರೆ. ಕಾರಣ ಸಮೃದ್ಧಿ ಬಾಲ್ಯದಲ್ಲಿಯೇ ಹಲವು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ.
ಸಮೃದ್ಧಿಯ ಈ ಅಪರೂಪದ ಸಾಧನೆ ಗುರುತಿಸಿದ ಸಿರಿಗನ್ನಡ ಸ್ವರ ಸಂಗೀತ ಸಂಸ್ಥೆ ಅವರನ್ನು ಸನ್ಮಾನಿಸಿ ಗೌರವಿಸಿದೆ.
ಸಂಸ್ಥೆಯ ಅಧ್ಯಕ್ಷ ಗ್ಯಾನಪ್ಪ ತಳವಾರ ವಿದ್ಯಾರ್ಥಿನಿಯ ಸಾಧನೆ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.