
ಮುನಿರಾಬಾದ್: ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಮಾರುತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ 12 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ‘ಸುಮಾರು 25 ವರ್ಷಗಳಿಂದ ಸಾಮೂಹಿಕ ಮದುವೆ ಮಾಡುತ್ತಿರುವ ಹೊಸಹಳ್ಳಿ ಗ್ರಾಮಸ್ಥರ ಹೃದಯ ವಿಶಾಲವಾಗಿದೆ ಎಂದರು.
ಕುಣಿಕೇರಿಯ ಹುಚ್ಚಮ್ಮ ಚೌಧರಿ, ಗಣ್ಯರಾದ ಸಂಪತ್ ರಾಜ್ ಮಣ್ಣೂರ, ಪಂಚಾಕ್ಷರಯ್ಯ ಹಿರೇಮಠ, ಹನುಮಂತಪ್ಪ ಮೆಟ್ಟಿನ್, ಗಟ್ಟೆಪ್ಪ ಈಳೀಗೇರ, ಮಾರುತಿ ಬಗನಾಳ, ಮಂಜುನಾಥ ಕಲಾಲ್, ಸದ್ದಾಮ್ ಹುಸೇನ್ ಕಳ್ಳಿಮನಿ, ಅಬ್ದುಲ್ ವಾಹಿದ್, ಅರ್ಚಕ ಚಂದ್ರಶೇಖರಯ್ಯ ಹಿರೇಮಠ, ಮೈನಳ್ಳಿ ಮಠದ ಸಿದ್ದೇಶ್ವರ ಶಿವಾಚಾರ್ಯರು, ಶ್ರೀಶೈಲ ಶಾಖಾಮಠದ ನಾಗಭೂಷಣ ದೇಶಿಕರು ಇದ್ದರು.
ಜಾತ್ರೆ; ಮುಳ್ಳು ಆಚರಣೆ: ಜಾತ್ರೆ ಅಂಗವಾಗಿ ಮಧ್ಯಾಹ್ನ ಮುಳ್ಳಿನ ರಾಶಿಯಲ್ಲಿ ಹಾರಿ ಹಲವು ಯುವಕರು ಹರಕೆ ತೀರಿಸಿದರು.
ಸಂಜೆ ನಡೆದ ಮಾರುತೇಶ್ವರ ಧಾರ್ಮಿಕ ಧ್ವಜದ ಹರಾಜನಲ್ಲಿ ₹32,100 ಮೊತ್ತಕ್ಕೆ ಗ್ರಾಮದ ದುರುಗಪ್ಪ ಹನುಮಪ್ಪ ಮೆಟ್ಟಿನ್ ಅವರು ಪಡೆದುಕೊಂಡರು. ರಾತ್ರಿ ಮದ್ದು ಸುಡುವ ಹಾಗೂ ಅಗ್ನಿಗೊಂಡ ಕಾರ್ಯಕ್ರಮ ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.