ಕೊಪ್ಪಳ: ತೊಗಲು ಗೊಂಬೆಯಾಟದಲ್ಲಿ ಮಾಡಿದ ಸಾಧನೆಗಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತಾಲ್ಲೂಕಿನ ಮೋರನಾಳ ಗ್ರಾಮದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರಿಗೆ ಅಭಿನಂದನೆ ಹಾಗೂ ಸನ್ಮಾನಗಳ ಮಹಾಪೂರವೇ ಹರಿದು ಬರುತ್ತಿದೆ.
ಪಕ್ಷದ ನಾಯಕರನ್ನು ಒಳಗೊಂಡ ಬಿಜೆಪಿ ನಿಯೋಗ ಸೋಮವಾರ ಮೋರನಾಳ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿಯೇ ಕಾರ್ಯಕ್ರಮ ನಡೆಸಿ ಅಜ್ಜಿಗೆ ಸನ್ಮಾನಿಸಿತು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್ ಹಾಗೂ ಇತರ ಮುಖಂಡರು ಮಾತನಾಡಿ ‘ತೊಗಲುಗೊಂಬೆಯಾಟ ನಮ್ಮ ಜಾನಪದ ಸಂಸ್ಕೃತಿಯ ಕಲೆಯಲ್ಲಿ ಒಂದಾಗಿದೆ. ಈ ಕಲೆಯಿಂದ ಇತಿಹಾಸದ ರಾಮಾಯಣ ಮಹಾಭಾರತದ ಕಲೆ, ಸಂಸ್ಕೃತಿ, ಸಾಹಿತ್ಯ, ಪರಂಪರೆಯ ಬಗ್ಗೆ ನೆನಪು ಮಾಡುವ ಇದೊಂದು ಕಲೆಯಾಗಿದೆ. ಅಜ್ಜಿಗೆ ಪದ್ಮಶ್ರೀ ಕೊಟ್ಟಿರುವುದರಿಂದ ಕಲೆಯ ಗರಿಮೆ ಹೆಚ್ಚಾಗಿದೆ’ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಗುಳಗಣ್ಣನವರ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಮುಖಂಡರಾದ ಚಂದ್ರಶೇಖರ್ ಪಾಟೀಲ್ ಹಲಿಗೇರಿ, ಮಹಾಂತೇಶ್ ಪಾಟೀಲ್ ಮೈನಹಳ್ಳಿ, ಗಣೇಶ್ ಹೊರತಟ್ನಾಳ, ಪ್ರದೀಪ್ ಹಿಟ್ನಾಳ, ವೀರೇಶ್ ಸಜ್ಜನ್, ವಾಣಿಶ್ರೀ ಮಠದ್, ಫಕೀರಪ್ಪ ಆರ್ಯಾರ್, ವೆಂಕಟೇಶ್ ಹಾಲವರ್ತಿ, ಪಾಂಡು ಹಟ್ಟಿ, ಅಂದಪ್ಪ ಬೋರನಾಳ, ನಾಗನಗೌಡರು ಡಂಬ್ರಳ್ಳಿ, ಬಸವ ರೆಡ್ಡಿ ಬೈರಾಪುರ, ಬಸವರಾಜ ಉಳ್ಳಾಗಡ್ಡಿ, ಶ್ರೀನಿವಾಸ್ ಕಲಾದಿಗಿ ಪಾಲ್ಗೊಂಡರು.
ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಸಾಧಕ ಅಜ್ಜಿಗೆ ಸನ್ಮಾನಿಸಿ ‘ಪದ್ಮಶ್ರೀ ಪ್ರಶಸ್ತಿ ಬಂದಿರುವುದರಿಂದ ನಶಿಸಿ ಹೋಗುತ್ತಿರುವ ಕಲೆಗೆ ಮರು ಜೀವ ತುಂಬಿದಂತಾಗಿದೆ. ತೊಗಲುಗೊಂಬೆ ಆಟವನ್ನು ಇನ್ನಷ್ಟು ಪ್ರಚುರಪಡಿಸುವ ಅಗತ್ಯವಿದೆ’ ಎಂದರು.
ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ, ಮುಖಂಡರಾದ ದೇವಪ್ಪ ಕಟ್ಟಿಮನಿ, ಅಳವಂಡಿ, ಭೀಮರಡ್ಡೆಪ್ಪ ಗದ್ದಿಕೇರಿ, ಶರಣಪ್ಪ ಮತ್ತುರ, ಬೆಟಗೇರಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.