ತರಲಕಟ್ಟಿ (ಯಲಬುರ್ಗಾ): ತಾಲ್ಲೂಕಿನ ತರಲಕಟ್ಟಿ ಗ್ರಾಮದಲ್ಲಿ ಶನಿವಾರ ಮಾರುತೇಶ್ವರ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಮನೆ, ಮನೆಗೆ ತೆರಳಿ ಭಕ್ತರ ಪೂಜೆ ಪುನಸ್ಕಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪೂಜೆ ಸಲ್ಲಿಸಿ ವಿವಿಧ ಕಾಣಿಗೆ ನೀಡಿದರು.
ಒಂದು ವಾರ ಗ್ರಾಮದಲ್ಲಿ ನಡೆಯುವ ಈ ಉತ್ಸವದ ಮೆರವಣಿಗೆಯನ್ನು ವಿವಿಧ ಓಣಿಯ ಜನರು ಅದ್ದೂರಿಯಾಗಿ ಸ್ವಾಗತಿಸಿ ಪೂಜಿಸುತ್ತಾರೆ. ಕೊನೆಯ ದಿನ ವಿವಿಧ ಧಾರ್ಮಿಕ ಚಟುವಟಿಕೆಗಳು ನಡೆಯುತ್ತವೆ. ಅಕ್ಕಿಪಾಯಸ, ಅಗ್ನಿಕುಂಡ ಹಾಯುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳ ಜತೆಗೆ ರಥೋತ್ಸವ ಜರುಗುತ್ತದೆ.
ಪಲ್ಲಕ್ಕಿ ಸೇವೆಯಲ್ಲಿ ವೀರನಗೌಡ ಪೊಲೀಸ್ ಪಾಟೀಲ, ಹಿರಣ್ಯಾಕ್ಷಗೌಡ ಮಾಲಿಪಾಟೀಲ, ಕರಿಯಪ್ಪ ಶಿಲ್ಪಿ, ಹನಮಂತಪ್ಪ ಚನ್ನದಾಸರ, ಶರಣಪ್ಪ ಕೋಳೂರ, ರಾಮಣ್ಣ ಮೇಟಿ, ಗುನ್ನೆಪ್ಪ ದಾಸರ, ಈರಪ್ಪ ಭಜಂತ್ರಿ, ರಾಮನಗೌಡ ಮಾಲಿಪಾಟೀಲ, ಸೋಮಲಿಂಗನಗೌಡ ಮಾಲಿ ಪಾಟೀಲ ಹಾಗೂ ಹನಮೇಶ ಪೂಜಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.