
ಗಂಗಾವತಿ: ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2025-26ನೇ ಸಾಲಿನಲ್ಲಿ ಕರ ವಸೂಲಾತಿ ಆಂದೋಲನ ಆರಂಭವಾಗಿದ್ದು, ವಿಶೇಷ ವ್ಯಕ್ತಿಗಳಿಗೆ ಶೇ50ರಷ್ಟು ವಿನಾಯಿತಿ ನೀಡಲಾಗಿದೆ.
ಬಾಕಿ ಉಳಿಸಿಕೊಂಡಿರುವ ಎಲ್ಲಾ ಸಾರ್ವಜನಿಕ ಮಳಿಗೆಗಳು, ರೈಸ್‌ಮಿಲ್‌ಗಳ ಮಾಲೀಕರು, ನಿವೇಶನ ಮತ್ತು ನೀರಿನ ತೆರಿಗೆ ಪಾವತಿಸಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ ಚಲವಾದಿ ಸೂಚಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ‘ಈಗಾಗಲೇ ಮನೆಮನೆ ಭೇಟಿ ನೀಡಿ ಗ್ರಾಮಸ್ಥರಿಗೆ ಕರ ವಸೂಲಾತಿ ಆಂದೋಲನದ ಮೂಲಕ ಜಾಗೃತಿ ಮೂಡಿಸಲಾಗಿದೆ. ತೆರಿಗೆ ಪಾವತಿ ಮಾಡುವ ಜತೆ ಪರವಾನಗಿ ನವೀಕರಣ ಮಾಡಿಕೊಳ್ಳಬೇಕು. ಬಾಕಿ ವರ್ಷಗಳ ತೆರಿಗೆ ಬೇಗನೆ ಪಾವತಿಸದಿದ್ದರೆ ವಾರ್ಷಿಕ ಶೇ. 5ರ ದಂಡದೊಂದಿಗೆ ವಸೂಲಾತಿಗೆ ಕ್ರಮ ವಹಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ.
‘ಸೈನಿಕರು, ಮಾಜಿ ಸೈನಿಕರು, ಮೃತ ಸೈನಿಕರ ಪತ್ನಿ, ಅಂಗವಿಕಲರು, ಎಚ್‌ಐವಿ ಏಡ್ಸ್ ಪೀಡಿತರು ಅಥವಾ ಕುಷ್ಟರೋಗದಿಂದ ಬಳಲುತ್ತಿರುವ ಮನೆಗಳ ಮಾಲೀಕರ ವಾಸದ ಮನೆಗಳಿಗೆ ಶೇ.50ರಷ್ಟು ತೆರಿಗೆ ವಿನಾಯಿತಿಯಿದೆ’ ಎಂದು ಅವರು ಗ್ರಾ.ಪಂ. ಅಧ್ಯಕ್ಷ ಮಂಜುಳಾ ಶಿವಪ್ಪ ನಾಯಕ, ಉಪಾಧ್ಯಕ್ಷ ಟಿ. ಗೌಸ್‌ಸಾಬ್ ಹುಸೇನಸಾಬ್ ಹೇಳಿದ್ದಾರೆ.
ಗ್ರಾ.ಪಂ. ವ್ಯಾಪ್ತಿಯ ಮಾಲೀಕರು ಕರ ಪಾವತಿಗೆ ಮೊ:8073563216, 7353334396 ಅಥವಾ 9242124789 ಸಂಪರ್ಕಿಸಬೇಕು ಎಂದು ಸುರೇಶ್ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.