ADVERTISEMENT

ಗ್ರಾಮೀಣ ರಂಗಭೂಮಿ ಕಲೆಗೆ ಪ್ರೋತ್ಸಾಹ ಅಗತ್ಯ: ಯಲ್ಲಪ್ಪ ಹಡಗಲಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 23:44 IST
Last Updated 21 ಫೆಬ್ರುವರಿ 2026, 23:44 IST
ಯಲಬುರ್ಗಾ ತಾಲ್ಲೂಕು ಮಕ್ಕಳ್ಳಿ ಗ್ರಾಮದ ಈಶ್ವರ ಬಸವೇಶ್ವರ ಜಾತ್ರೆಯ ಪ್ರಯುಕ್ತ ಆಯೋಜಿಸಿದ್ದ ಸಾಮಾಜಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಶಿವಾನಂದ ಸ್ವಾಮೀಜಿ ಸೇರಿ ಅನೇಕರ ಗಣ್ಯರು ಪಾಲ್ಗೊಂಡಿದ್ದರು
ಯಲಬುರ್ಗಾ ತಾಲ್ಲೂಕು ಮಕ್ಕಳ್ಳಿ ಗ್ರಾಮದ ಈಶ್ವರ ಬಸವೇಶ್ವರ ಜಾತ್ರೆಯ ಪ್ರಯುಕ್ತ ಆಯೋಜಿಸಿದ್ದ ಸಾಮಾಜಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಶಿವಾನಂದ ಸ್ವಾಮೀಜಿ ಸೇರಿ ಅನೇಕರ ಗಣ್ಯರು ಪಾಲ್ಗೊಂಡಿದ್ದರು   

ಯಲಬುರ್ಗಾ: ‘ಗ್ರಾಮೀಣ ಜನರ ಜೀವಾಳದಂತಿರುವ ರಂಗಭೂಮಿಗೆ ಸರ್ಕಾರ ವಿಶೇಷ ಪ್ರೋತ್ಸಾಹ ಕಲ್ಪಿಸಿಕೊಡುವ ಯೋಜನೆಯನ್ನು ರೂಪಿಸಬೇಕಿದೆ’ ಎಂದು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಯಲ್ಲಪ್ಪ ಹಡಗಲಿ ಹೇಳಿದರು.

ತಾಲ್ಲೂಕಿನ ಮಕ್ಕಳ್ಳಿ ಗ್ರಾಮದಲ್ಲಿ ಈಶ್ವರ ಬಸವೇಶ್ವರ ಜಾತ್ರೆಯ ಪ್ರಯುಕ್ತ ಈಶ ಶರಣಬಸವೇಶ್ವರ ನಾಟ್ಯ ಸಂಘದ ಕಲಾವಿದರು ಅಭಿನಯದ ‘ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ’ ಎಂಬ ಸಾಮಾಜಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರ ಮಾತನಾಡಿ, ‘ದೂರದರ್ಶನದಲ್ಲಿ ಪ್ರಸಾರವಾಗುವ ಧಾರಾವಾಹಿ ಹಾವಳಿಯಿಂದ ನಾಟಕ ಕಲೆ, ಡ್ರಾಮಾ ಕಂಪನಿಗಳು ಕಣ್ಮರೆಯಾಗುತ್ತಿವೆ. ದೊಡ್ಡ ದೊಡ್ಡ ನಾಟಕ ಕಂಪನಿಗಳು ಆರ್ಥಿಕ ದಿವಾಳಿತನವನ್ನು ಎದುರಿಸುತ್ತಿವೆ. ಸರ್ಕಾರ ಈ ಬಗ್ಗೆ ಕಾಳಜಿ ತೋರಬೇಕಾಗಿದೆ’ ಎಂದರು.

ADVERTISEMENT

ಸಹಕಾರಿ ಧುರೀಣ ಶಿವಣ್ಣ ವಾದಿ, ಅಯ್ಯನಗೌಡ ಕೆಂಚಮ್ಮನವರ ಮಾತನಾಡಿದರು. ಮಕ್ಕಳ್ಳಿ ಗ್ರಾಮದ ಶಿವಾನಂದ ಮಠದ ಶಿವಾನಂದ ಮಹಾಸ್ವಾಮಿಗಳ ಮಾತನಾಡಿ ಕಲಾವಿದರಿಗೆ ಶುಭ ಹಾರೈಸಿದರು.

ಮುಖಂಡರಾದ ಯಮನೂರಪ್ಪ ತಳವಾರ, ಗುಂಡನಗೌಡ ಸಾಲಭಾವಿ. ಬಾಲಾಜಿ ಬಡಿಗೇರ ಶರಣಪ್ಪ ಮೇಣೆದಾಳ, ನಿಂಗರಾಜು ಹೊಸ್ಮನಿ, ಭೀಮನಗೌಡ ಜಾಲಿಹಾಳ, ಯಮನೂರಪ್ಪ ತಳವಾರ, ಬಾಳಪ್ಪ ಬಂಡ್ಲಿ, ದುರಗಪ್ಪ ಮಕ್ಕಳ್ಳಿ, ಈರಪ್ಪ ಕರೆಕುರಿ, ಭೀಮಣ್ಣ ಹವಳಿ, ಭಿಮಜ್ಜ ಗುರಿಕಾರ, ಸಣ್ಣ ಹನುಮಪ್ಪ ಕರೆಕುರಿ, ಬಸಣ್ಣ ದಮ್ಮೂರು, ಗಾಳೇಶ ಮಕ್ಕಳ್ಳಿ, ಸುರೇಶ ಬಾಬು, ಶರಣಪ್ಪ, ನೀರುಪಾದಿಗೌಡ ಮಾಲಿಪಾಟೀಲ ಸೇರಿ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.