ADVERTISEMENT

ಕಾರ್ಖಾನೆಗಳ ಕಪ್ಪು ದೂಳು: ಗ್ರಾಮಸ್ಥರ ವ್ಯಥೆ ನೋಡಿ ಕಣ್ಣೀರು ಹಾಕಿದ ಗವಿಶ್ರೀ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 11:47 IST
Last Updated 24 ಫೆಬ್ರುವರಿ 2025, 11:47 IST
   

ಕೊಪ್ಪಳ: ಕಾರ್ಖಾನೆಗಳು ಹೊರ ಬಿಡುತ್ತಿರುವ ಕಪ್ಪು ದೂಳಿನ ಮಾಲಿನ್ಯದಿಂದ ನಲುಗಿ ಹೋಗಿರುವ ಗ್ರಾಮಸ್ಥರ ಕಣ್ಣೀರಿನ ಕಥೆಗಳನ್ನು ನೋಡಿ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಭಾವುಕರಾಗಿ ಕಣ್ಣೀರು ಸುರಿಸಿದರು.

ತಾಲ್ಲೂಕು ಕ್ರೀಡಾಂಗಣದಲ್ಲಿ ಕೊಪ್ಪಳ ಬಂದ್ ಅಂಗವಾಗಿ ಹಮ್ಮಿಕೊಂಡಿದ್ದ ಬಹಿರಂಗ ಸಭೆ ಆರಂಭಕ್ಕೂ ಮೊದಲು ಕಾರ್ಖಾನೆಗಳು ಸುತ್ತಲು ಇರುವ ಹಾಲವರ್ತಿ, ಅಲ್ಲಾನಗರ, ಚಿಕ್ಕಬಗನಾಳ, ಹಿರೇಬಗನಾಳ, ಕಾಸನಕಂಡಿ ಗ್ರಾಮಗಳ ಜನ ದೂಳಿನಿಂದ ಅನುಭವಿಸುತ್ತಿರುವ ತೊಂದರೆಗಳನ್ನು ವಿಡಿಯೊವನ್ನು ತೋರಿಸಲಾಯಿತು. ಅದರಲ್ಲಿ ಶಾಲೆಗೆ ಹೋಗುವ ಬಾಲಕಿ ’ದೂಳಿನಿಂದ ಸಣ್ಣ ವಯಸ್ಸಿಗೆ ಅಸ್ತಮಾ ಬಂದಿದೆ. ನನ್ನ ತಂದೆ ಆಸ್ಪತ್ರೆಗೆ ತೋರಿಸಿ ಹಣವಿಲ್ಲವೆಂದು ಈಗ ಕೈ ಚೆಲ್ಲಿದ್ದಾರೆ’ ಎನ್ನುತ್ತ ಕಣ್ಣೀರು ಹಾಕುವ ದೃಶ್ಯ ಪ್ರಸಾರವಾಯಿತು. ಅನೇಕ ಮಹಿಳೆಯರು ನಿತ್ಯ ತಾವು ಎದುರಿಸುತ್ತಿರುವ ನೋವು ಹೇಳಿಕೊಂಡಾಗ ಸ್ವಾಮೀಜಿ ಕೂಡ ಕಣ್ಣೀರು ಸುರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT