ADVERTISEMENT

ಕನಕಗಿರಿ | ಎಂಪಾಯಿರ್ ಸೋಲಾರ್ ಕಂಪೆನಿ ಸೇವೆ ಶ್ಲಾಘನೀಯ: ಲಕ್ಷ್ಮಣ‌ ಹಿರೇಖೇಡ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 5:35 IST
Last Updated 6 ಫೆಬ್ರುವರಿ 2026, 5:35 IST
ಕನಕಗಿರಿ ತಾಲ್ಲೂಕಿನ ಸುಳೇಕಲ್ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಶುದ್ದ‌ ಕುಡಿಯುವ ನೀರಿನ ಘಟಕದ‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಂಪಾಯಿರ್ ಕಂಪೆನಿಯ ಅಧಿಕಾರಿಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು
ಕನಕಗಿರಿ ತಾಲ್ಲೂಕಿನ ಸುಳೇಕಲ್ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಶುದ್ದ‌ ಕುಡಿಯುವ ನೀರಿನ ಘಟಕದ‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಂಪಾಯಿರ್ ಕಂಪೆನಿಯ ಅಧಿಕಾರಿಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು   

ಕನಕಗಿರಿ: ‘ಎಂಪಾಯಿರ್‌ ಸೋಲಾರ ಕಂಪನಿಯ ಶೈಕ್ಷಣಿಕ ಹಾಗೂ ಸಾಮಾಜಿಕ ಕಳಕಳಿ ಮೆಚ್ಚುವಂತದ್ದು‌’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ‌ ಹಿರೇಖೇಡ ತಿಳಿಸಿದರು.

ಸಮೀಪದ ಸೂಳೇಕಲ್ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ನಡೆದ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಂಪನಿಯವರು ಪಂಚಾಯಿತಿ ವ್ಯಾಪ್ತಿಯ ಕಲಕೇರಿ,‌ ತಿಪ್ಪನಾಳ,‌ ಸುಳೇಕಲ್ ಹಾಗೂ ಬೆನಕನಾಳ ಗ್ರಾಮದಲ್ಲಿ ಒಟ್ಟು 80 ಸೋಲಾರ್ ಬೀದಿ ದೀಪಗಳನ್ನು ಅಳವಡಿಸಿದ್ದಲ್ಲದೇ ರೈತರಿಗೆ ಬಯೋ ಗ್ಯಾಸ್ ನೀಡಿ ಅನುಕೂಲ ಮಾಡಿದ್ದಾರೆ ಎಂದು ಸ್ಮರಿಸಿದರು.

ADVERTISEMENT

ಗ್ರಾಮ‌ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವಾನಂದ ವಂಕಲಕುಂಟಿ, ಪ್ರಭಾರ ಮುಖ್ಯಶಿಕ್ಷಕ ಸಿದ್ದರೂಡ ಬಣಕಾರ ಮಾತನಾಡಿದರು. ಸೋಲಾರ ಕಂಪನಿಯ ಹವಾಮಾನ ನಿಧಿ ವ್ಯವಸ್ಥಾಪಕ ಕ್ಲೇರ್, ಟಿಯೋಡೋರಾ, ಫ್ಲೂರ್ , ಲೂಯಿಸಾ, ಆಶಿಶ್ ಆಂಪಿರ್, ಮೋನಿಕಾ ಆಂಪಿರ್, ಪೂಜಾ ಇಕನೆಕ್ಟ್, ಬಸವರಾಜ ಶೆಟ್ಟರ್, ಉಪಮನ್ಯು ಪಾಟೀಲ, ಎಸ್‌ಡಿಎಂಸಿ ಅಧ್ಯಕ್ಷ ಲಿಂಗಪ್ಪ, ಕೃಷಿ ಪ್ರಾಥಮಿಕ ಪತ್ತಿನ‌ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ, ಎಸ್‌ಡಿಎಂಸಿ ಸದಸ್ಯ ಎಂ.ವೀರಭದ್ರಪ್ಪ, ಶರಣೆಗೌಡ,‌ ಈರಣ್ಣ ಹೇರೂರು, ಪ್ರಮುಖರಾದ ಗಂಗಣ್ಣ ಗಣಗೂರು, ಮೈನುಸಾಬ ಸೂಳೇಕಲ್, ಮೌನೇಶ ಬಡಿಗೇರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.