ADVERTISEMENT

ಎಸ್.ಎಸ್.ಎಲ್.ಸಿ. ಪರೀಕ್ಷಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದ ಅಮರೇಶ ಕರಡಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 7:44 IST
Last Updated 19 ಜುಲೈ 2021, 7:44 IST
   

ಕೊಪ್ಪಳ: ವಿದ್ಯಾರ್ಥಿ ಗಳ ಭವಿಷ್ಯದ ಅತ್ಯಂತ ಮಹತ್ವದ ಘಟ್ಡವಾಗಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಾವುದೇ ಭಯ, ಆತಂಕಕ್ಕೆ ಒಳಗಾಗದೆ ಆತ್ಮಸ್ಥೈರ್ಯದಿಂದ ಪರೀಕ್ಷೆ ಎದುರಿಸುವುಂತೆ ಕೆಡಿಪಿ ಸದಸ್ಯ ಅಮರೇಶ ಕರಡಿ ಹೇಳಿದರು.

ನಗರದ ಬಾಲಕಿಯರ ಸರಕಾರಿ ಪ್ರೌಡಶಾಲೆಯಲ್ಲಿ ಸೋಮವಾರದಂದು ಕರಡಿ ಫೌಂಡೇಶನ್ ವತಿಯಿಂದ ಕೋವಿಡ್ ನ ಅತ್ಯಂತ ಸುರಕ್ಷತೆ ಹೊಂದಿರುವ ಎನ್-95 ಮಾಸ್ಕ್ ಗಳನ್ನು ಎಲ್ಲಾ ಪರೀಕ್ಷಾರ್ಥಿಗಳಿಗೆ ವಿತರಿಸಿ ಮಾತನಾಡಿದರು.

ಕೊಪ್ಪಳ ತಾಲ್ಲೂಕಿನ ಎಲ್ಲಾ 28 ಪರೀಕ್ಷಾ ಕೇಂದ್ರಗಳಲ್ಲಿನ 7365 ವಿದ್ಯಾರ್ಥಿಗಳಿಗೆ ಕರಡಿ ಫೌಂಡೇಶನ್ ನಿಂದ ಕೋವಿಡ್ ಸುರಕ್ಷತೆಯ ಮಾಸ್ಕ್ ಗಳನ್ನು ಕರಡಿ ಕುಟುಂಬದ ಸದಸ್ಯರು, ಮತ್ತು ಬಿಜೆಪಿ ಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳು ವಿತರಿಸಿ ಜೊತೆಗೆ ವಿದ್ಯಾರ್ಥಿಗಳನ್ನು ಖುದ್ದು ಭೇಟಿ ಮಾಡಿ ಅವರಲ್ಲಿ ಆತ್ಮಸ್ಥೈರ್ಯನ್ನು ತುಂಬುವ ಕೆಲಸವನ್ನು ಮಾಡಿದೆ ಎಂದರು.

ADVERTISEMENT

ಕರಡಿ ಫೌಂಡೇಶನ್ ಸದಾ ಸಮಾಜ ಸೇವೆಯಲ್ಲಿ ಮುಂದು ಇದ್ದು, ಕೊರೊನಾ ಒಂದನೇ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಸಹಾಯ ಹಸ್ತವನ್ನು ನೀಡಿ, ಅನೇಕ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡಿದೆ, ವಿದ್ಯಾರ್ಥಿಗಳಿಗೆ ಟ್ಯಾಬ್, ಮೊಬೈಲ್ ಗಳನ್ನು ನೀಡಿ, ಅವರ ಶಿಕ್ಷಣಕ್ಕೆ ಬೇಕಾದ ಅನುಕೂಲತೆಯನ್ನು ಮಾಡಿರುವದು ನಮಗೆ ಹೆಮ್ಮೆ ಇದೆ, ಇದೇ ರೀತಿ ಇನ್ನು ಅನೇಕ ಸೇವಾ ಮನೋಭಾವದ ಕಾರ್ಯಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

ಸರ್ಕಾರದ ಮಾರ್ಗ ಸೂಚಿಗಳನ್ವಯ ಜಿಲ್ಲಾಡಳಿತವು ಪರೀಕ್ಷೆಗೆ ಅಗತ್ಯ ಎಲ್ಲಾ ಮುಂಜಾಗೃತೆ, ಸುರಕ್ಷಾ ಕ್ರಮಗಳನ್ನು ಕೈಗೊಂಡಿದೆ, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯತ್ವಕ್ಕೆ ನಡೆಸಿರುವ ಈ ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.

ಬಿಇಓ ಉಮೇಶ್ ಪೂಜಾರ ಅವರು ಕರಡಿ ಫೌಂಡೇಶನ್ ನ ಕಾರ್ಯಕ್ಷಮತೆ ಬಗ್ಗೆ ಪ್ರಶಂಸಿದರು, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಇದ್ದರು

ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ಸುನೀಲ್ ಕುಮಾರ ಹೆಸರೂರ, ಯುವ ಮುಖಂಡರಾದ ರವಿಚಂದ್ರನ್ ಮಾಲಿಪಾಟೀಲ, ವಾಣೀಶ್ರೀ ಮಠದ, ಗವಿ ಜಂತಕಲ್, ಸೇರಿದಂತೆ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.