
ಕನಕಗಿರಿ: ಪಟ್ಟಣದ ಶ್ರೀ ಸಾಯಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಸುಗ್ಗಿ ಹಬ್ಬ ಕಾರ್ಯಕ್ರಮ ನಡೆಯಿತು.
ಮಕರ ಸಂಕ್ರಾಂತಿ ಹಬ್ಬದ ಪ್ರಾಮುಖ್ಯತೆ ಹಾಗೂ ಹಬ್ಬದ ವಿಶೇಷತೆಯಾಗಿರುವ ಧಾನ್ಯಗಳ ಪೂಜೆ, ಎಳ್ಳು ಬೆಲ್ಲ ಹಂಚುವುದು ಇತರೆ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳು ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದರು. ಕೊರವಂಜಿ, ದಾಸಯ್ಯ ಹಾಗೂ ಹಳ್ಳಿ ಸೊಗಡಿನ ವೇಷ ಧರಿಸಿ ಗಮನ ಸೆಳೆದರು.
ಬಾಲ್ಯದಿಂದಲೇ ಹಬ್ಬಗಳ ಮಾಹಿತಿ ವಿದ್ಯಾರ್ಥಿಗಳಿಗೆ ಇರಬೇಕು ಎಂಬ ಕಾರಣಕ್ಕೆ ದೇಶದ ವಿವಿಧ ಹಬ್ಬಗಳು ಹಾಗೂ ವೇಷಭೂಷಣಗಳ ಬಗ್ಗೆ ಅರಿವು ಮೂಡಿಸಲು ‘ಸುಗ್ಗಿ ಹಬ್ಬ’ ಕಾರ್ಯಕ್ರಮ ನಡೆಸಲಾಗಿದೆ ಎಂದು ಮುಖ್ಯಶಿಕ್ಷಕ ಹರೀಶ ನಾಯಕ ತಿಳಿಸಿದರು.
ಸಹ ಮುಖ್ಯಶಿಕ್ಷಕಿ ಸವಿತಾ ನಾಯ್ಕ, ಶಿಕ್ಷಕರಾದ ಬೀಬಿ ಫಾತಿಮಾ, ಮಂಜುನಾಥ ಮಾಲಿಪಾಟೀಲ, ಮಂಜುನಾಥ ಮಿಟ್ಲಕೋಡ, ತ್ರಿವೇಣಿ ರಾಮ್ ಜಿ., ಪಿ.ಮೇಘಶ್ರೀ, ವೆಂಕಟೇಶ ಕಂಠಿ, ಮರಿಯಮ್ಮ ಚಲುವಾದಿ, ರಿಯಾನಾ ಬೇಗಂ, ಸುನೀತಾ.ಸಿ, ರಾಜೇಶ್ವರಿ.ವಿ, ನೀಲಾ, ರೋಜಾ , ವೆಂಕಟೇಶ , ಜುಬೇದಾ ಬೇಗಂ, ಜಡೇಶ.ವಿ, ಭೀಮೇಶ, ಹನುಮೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.