ADVERTISEMENT

ಗಂಗಾವತಿ: 25 ಕೆಜಿ ಅಕ್ಕಿಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರಿದ ಯುವತಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 4:53 IST
Last Updated 16 ಸೆಪ್ಟೆಂಬರ್ 2025, 4:53 IST
ಯುವತಿಯೊಬ್ಬಳು 25 ಕೆಜಿ‌ ಅಕ್ಕಿಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರಿದಳು
ಯುವತಿಯೊಬ್ಬಳು 25 ಕೆಜಿ‌ ಅಕ್ಕಿಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರಿದಳು   

ಗಂಗಾವತಿ: ಯುವತಿಯೊಬ್ಬಳು 25 ಕೆಜಿ‌ ಅಕ್ಕಿಚೀಲ ಹೊತ್ತು ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ 575 ಮೆಟ್ಟಿಲು ಏರಿದ ಘಟನೆ ಭಾನುವಾರ ನಡೆದಿದೆ.

ಬೆಟ್ಟ ಏರಿದ ಯುವತಿ ದಾವಣಗೆರೆ ಮೂಲದ ವಿದ್ಯಾ ಎಂದು ತಿಳಿದು ಬಂದಿದೆ. 25 ಕೆಜಿ ಅಕ್ಕಿಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರುವುದಾಗಿ ಈ ಹಿಂದೆ ಯುವತಿ ಹರಕೆ ಹೊತ್ತಿದ್ದು, ಅದರಂತೆ ಕುಟುಂಬದ ಜೊತೆ ಯುವತಿ ಅಕ್ಕಿಚೀಲ ಹೊತ್ತು, ಬೆಟ್ಟ ಏರಿ, ಆಂಜನೇಯನಿಗೆ ಸಮರ್ಪಿಸಿ, ದರ್ಶನ ಪಡೆದಿದ್ದಾಳೆ. ಈ ವೇಳೆ ಯುವತಿ ಸ್ನೇಹಿತರು, ಕುಟುಂಬಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.