ಯಲಬುರ್ಗಾ: ‘ಡಾ.ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಅವರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲು ಸರ್ವ ಸಮಾಜದ ಸಮನ್ವಯದೊಂದಿಗೆ ತಾಲ್ಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ’ ಎಂದು ತಹಶೀಲ್ದಾರ್ ಬಸವರಾಜ ತೆನ್ನಳ್ಳಿ ಹೇಳಿದರು.
ಸ್ಥಳೀಯ ಕಂದಾಯ ಸಭಾಭವನದಲ್ಲಿ ಹಮ್ಮಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಏ.5ರಂದು ಬಾಬು ಜಗಜೀವನರಾಂ, ಏ. 14ರಂದು ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಗುತ್ತದೆ. ವಿವಿಧ ಸಂಘಟನೆಯ ಪದಾಧಿಕಾರಿಗಳು, ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು, ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಹನೀಯರಿಗೆ ಗೌರವಿಸಬೇಕು’ ಎಂದು ಸಲಹೆ ನೀಡಿದರು.
ಸಮಾಜದ ಮುಖಂಡರು ಕುಕನೂರು ಮತ್ತು ಯಲಬುರ್ಗಾ ತಾಲ್ಲೂಕಿನ ಅಧಿಕಾರಿಗಳು ಎರಡು ಕಡೆ ಕಾರ್ಯನಿರ್ವಹಿಸುತ್ತಿದ್ದಾರೆ. ಏ.5ರಂದು ಕುಕನೂರು ಪಟ್ಟಣದಲ್ಲಿ ಯಲಬುರ್ಗಾ ಮತ್ತು ಕುಕನೂರು ಒಟ್ಟಿಗೆ ಸೇರಿ ಬಾಬಾ ಜಗಜೀವನರಾಂ ರವರ ಜಯಂತಿ ಆಚರಿಸಲು ನಿರ್ಣಯಿಸಲಾಗಿದೆ. ಹಾಗೆಯೇ ಏ.14 ಅಂಬೇಡ್ಕರ್ ಜಯಂತಿಯನ್ನು ಯಲಬುರ್ಗಾ ಪಟ್ಟಣದಲ್ಲಿ ಎರಡು ತಾಲ್ಲೂಕು ಸೇರಿ ಆಚರಿಸಲಾಗುವುದು. ಯಲಬುರ್ಗಾ ಪಟ್ಟಣದ ಕನಕದಾಸ ವೃತ್ತದಿಂದ ಮಹಿಳೆಯರು ಕುಂಭೋತ್ಸವ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆ ಜರುಗಲಿದೆ. ನಂತರ ಬಯಲು ರಂಗ ಮಂದಿರದಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಛಲವಾದಿ ಸಮಾಜದ ತಾಲ್ಲೂಕು ಅಧ್ಯಕ್ಷ ಅಂದಪ್ಪ ಹಾಳಕೇರಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಅಮರೇಶ ಹುಬ್ಬಳ್ಳಿ, ವಸಂತ ಭಾವಿಮನಿ. ತಾ.ಪಂ ಇಒ ಸಂತೋಷ ಬಿರಾದಾರ ಪಾಟೀಲ, ಪಿಎಸ್‍ಐ ವಿಜಯ ಪ್ರತಾಪ, ಸಮಾಜ ಕಲ್ಯಾಣ ಇಲಾಖೆ ಶಶಿಧರ ಸಕ್ರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಶಿವಶಂಕರ ಕರಡಕಲ್, ಪ.ಪಂ ಮುಖ್ಯಾಧಿಕಾರಿ ಎಚ್.ನಾಗೇಶ, ಮುಖಂಡರಾದ ಶಂಕರ ಭಾವಿಮನಿ, ಯಮನೂರಪ್ಪ ನಡಲಮನಿ, ಡಿ.ಕೆ. ಪರಶುರಾಮ, ಸಿದ್ದಪ್ಪ ಕಟ್ಟಿಮನಿ, ಹುಲಗಪ್ಪ ಹಿರೇಮನಿ, ಪ್ರಭುರಾಜ ಕಡೆಮನಿ, ಶಿವಮೂರ್ತಿ ಇಟಗಿ, ಭೀಮಣ್ಣ ಹವಳಿ ಸೇರಿ ಅನೇಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.