ಕೆ.ಆರ್.ಪೇಟೆ: ಪಟ್ಟಣದ ದೇವಿರಮ್ಮಣ್ಣಿ ಕೆರೆಯಲ್ಲಿ ಬೆಳ್ಳಂಬೆಳಿಗ್ಗೆ ಬಂಗಾರ ಬಣ್ಣದ ಗೌರಿ ಮೀನು. ಬಲೆಗೆ ಬಿದ್ದಿದ್ದು, ನೋಡಲು ಜನರು ನೆರೆದಿದ್ದರು.
ದೇವಿರಮ್ಮಣ್ಣಿ ಕೆರೆಯಲ್ಲಿ ಮೀನು ಹಿಡಿಯಲು ಇಂದು ಮುಂಜಾನೆ ರಾಮಚಂದ್ರನಾಯಕ ಎಂಬುವವರು ಬಲೆ ಬೀಸಿದ್ದರು. ಬಲೆಯನ್ನು ಎತ್ತಿದಾಗ ಬಲೆಗೆ ಬಿದ್ದಿದ್ದ ಬಂಗಾರ ಬಣ್ಣದ ಗೌರಿ ಮೀನು ಬಿದ್ದಿತು. ಮೀನು ಕೊಳ್ಳಲು ಬಂದಿದ್ದ ಜನ ಮುಗಿಬಿದ್ದು ವ್ಯಾಪಾರ ಮಾಡಿದಾಗ 4 ಕೆಜಿ ತೂಕವಿದ್ದ ಗೌರಿ ಮೀನನ್ನು ವಳಗೆರೆ ಮೆಣಸದ ರಾಜು ಎಂಬುವವರು ₹1000ಕ್ಕೆ ಕೊಂಡುಕೊಂಡರು.
‘ಈ ಮೀನು ಅಪರೂಪವಾಗಿದ್ದು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ’ ಎಂದು ಮೀನು ಮಾರಾಟಗಾರ ಬಲೆ ರಾಮು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.