
ಪ್ರಜಾವಾಣಿ ವಾರ್ತೆ
ಮಳವಳ್ಳಿ/ಹಲಗೂರು: ರಾಜ್ಯ ಸರ್ಕಾರದ 2024ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ತಾಲ್ಲೂಕಿನ ಪೊಲೀಸ್ ಅಧಿಕಾರಿಗಳು ಆಯ್ಕೆಯಾಗಿದ್ದಾರೆ.
ಹಲಗೂರು ಪೊಲೀಸ್ ಠಾಣೆಯ ಸಿಪಿಐ ಬಿ.ಎಸ್. ಶ್ರೀಧರ್ ಹಾಗೂ ಕಿರುಗಾವಲು ಪೊಲೀಸ್ ಪಿಎಸ್ಐ ಡಿ. ರವಿಕುಮಾರ್ ಅವರಿಗೆ ದಕ್ಷ ನಿರ್ಹವಣೆ, ಅಪರಾಧ ಚಟುವಟಿಕೆ ನಿಯಂತ್ರಣ, ಕಳ್ಳತನ ಪ್ರಕರಣ ಪತ್ತೆ ಕಾರ್ಯ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನೀಡಿದ ಅಮೂಲ್ಯ ಸೇವೆ ಹಾಗೂ ಸಮುದಾಯ ಸ್ನೇಹಪೂರ್ಣ ಕಾರ್ಯದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ಲಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.