ಕಿಕ್ಕೇರಿ: ನ್ಯಾಯಾಲಯದ ನೋಟಿಸ್ ನೀಡಲು ಮನೆಗೆ ತೆರಳಿದ್ದ ಅಮೀನ್‌ಗೆ ಆರೋಪಿ ಪತ್ನಿ ಖಾರದಪುಡಿ ಎರಚಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ದೂರು ದಾಖಲಾಗಿದೆ. ಅಪಘಾತ ಪ್ರಕರಣವೊಂದರ ಸಂಬಂಧ ನೋಟಿಸ್ ನೀಡಲು ಹೋಬಳಿಯ ಕಾಳೇನಹಳ್ಳಿ ಗ್ರಾಮದ ಚಿಕ್ಕಈರೇಗೌಡ ಅವರ ಮನೆಗೆ ಶನಿವಾರ ನ್ಯಾಯಾಲಯದ ಅಮೀನ್ ಶಂಕರೇಗೌಡ ತೆರಳಿದ್ದರು.
ಅಪಘಾತದ ವ್ಯಾಜ್ಯ ಚಿಕ್ಕಮಗಳೂರಿನಲ್ಲಿ ನಡೆಯುತ್ತಿತ್ತು. ಈಚೆಗೆ ಕೆ.ಆರ್. ಪೇಟೆ ನ್ಯಾಯಾಲಯಕ್ಕೆ ವರ್ಗಾವಣೆ ಆಗಿತ್ತು. ನ್ಯಾಯಾಧೀಶರು ವ್ಯಾಜ್ಯ ಸಂಬಂಧ ಚಿಕ್ಕಈರೇಗೌಡಗೆ ನೋಟಿಸ್ ಜಾರಿ ಮಾಡಿದ್ದರು.
ಇದನ್ನು ಕೊಡಲು ಶಂಕರೇಗೌಡ ಹೋಗಿದ್ದಾಗ ಚಿಕ್ಕಈರೇಗೌಡ ಅವರ ಪತ್ನಿ ಸಾಕಮ್ಮ ಅವರ ಕಣ್ಣಿಗೆ ಖಾರದ ಪುಡಿ ಎರಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ವಿಡಿಯೊ ಎಲ್ಲೆಡೆ ಹರಿದಾಡಿದೆ. ಪೊಲೀಸರಿಗೆ ತಿಳಿಸದೆ ಅಮೀನ್ ಆರೋಪಿ ಮನೆಗೆ ಹೋಗಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.