ADVERTISEMENT

ಕಾರ್ತಿಕ ಮಾಸದ ಕಡೇ ಸೋಮವಾರ: ಸಾಸಲು ಗ್ರಾಮದಲ್ಲಿ ಭಕ್ತರು ದಂಡು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 6:03 IST
Last Updated 18 ನವೆಂಬರ್ 2025, 6:03 IST
ಕಿಕ್ಕೇರಿ ಹೋಬಳಿಯ ಸಾಸಲು ಸೋಮೇಶ್ವರ ದೇವರಿಗೆ ಸೋಮವಾರ ಅಲಂಕಾರ ಮಾಡಲಾಗಿತ್ತು 
ಕಿಕ್ಕೇರಿ ಹೋಬಳಿಯ ಸಾಸಲು ಸೋಮೇಶ್ವರ ದೇವರಿಗೆ ಸೋಮವಾರ ಅಲಂಕಾರ ಮಾಡಲಾಗಿತ್ತು    

ಕಿಕ್ಕೇರಿ: ಕಾರ್ತಿಕ ಮಾಸದ ಕಡೇ ಸೋಮವಾರದ ಪ್ರಯುಕ್ತ ಹೋಬಳಿಯ ಸಾಸಲು ಗ್ರಾಮದಲ್ಲಿ ದೇವರ ದರ್ಶನಕ್ಕೆ ಹೆಚ್ಚಿನ ಭಕ್ತರು ಭೇಟಿ ನೀಡಿದ್ದರು.

ಬ್ರಾಹ್ಮಿ ಮುಹೂರ್ತದಿಂದ ರಾತ್ರಿಯವರೆಗೆ ಭಕ್ತರ ದಂಡು ದಂಡು ನೆರೆದಿತ್ತು. ಹೋಬಳಿಯಲ್ಲದೇ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿ ಸೋಮೇಶ್ವರ ಪುಷ್ಕರಿಣಿಯಲ್ಲಿ ಸ್ನಾನ ಮಾಡಿ ಸೋಮೇಶ್ವರ, ಶಂಭುಲಿಂಗೇಶ್ವರ, ಕುದುರೆಮಂಡಮ್ಮ ದೇವರ ದರ್ಶನ ಪಡೆಯಲು ಜಮಾಯಿಸಿದ್ದರು.

ಅರ್ಚಕರು ಸೋಮೇಶ್ವರ, ಶಂಭುಲಿಂಗೇಶ್ವರ ದೇವರಿಗೆ ವಿಶೇಷ ಅಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ ನೆರವೇರಿಸಿದ್ದರು. ವಿವಿಧ ಪುಷ್ಪ, ಆಭರಣದೊಂದಿಗೆ ಮೂರ್ತಿಯನ್ನು ಅಲಂಕರಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಟ್ಟರು. ನಾಗಬನದಲ್ಲಿ ಭಕ್ತರು ಹುತ್ತಕ್ಕೆ ಹಾಲಿನ ತನಿ ಎರೆದು ಇಷ್ಟಾರ್ಥ ಸಿದ್ಧಿ, ಚರ್ಮರೋಗ ಬಾಧಿಸದಂತೆ ಪ್ರಾರ್ಥಿಸಿದರು.

ADVERTISEMENT

ಮುಜರಾಯಿ ಇಲಾಖೆಯ ದೇಗುಲ ನವೀಕರಣದ ನಿಮಿತ್ತ ದೇವರ ಮೂರ್ತಿಗಳನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಿದ್ದರಿಂದ ಕಿಷ್ಕಿಂದೆಯಂತಹ ಜಾಗದಲ್ಲಿ ದೇವರ ದರ್ಶನ ಪಡೆಯಲು ಪರಿತಪಿಸಿದರು. ಮಹಿಳೆಯರು ಬಟ್ಟೆ ಬದಲಾಯಿಸಿಕೊಳ್ಳಲು ಸೂಕ್ತ ಸ್ಥಳವಿಲ್ಲದೆ ಪರದಾಡಿದರು.

೧೭ಕೆಕೆಆರ್೧
ಕಿಕ್ಕೇರಿ ಹೋಬಳಿಯ ಸಾಸಲು ಸೋಮೇಶ್ವರ ದೇವರಿಗೆ ಕಾರ್ತಿಕ ಮಾಸದ ಸೋಮವಾರ ಮಾಡಲಾಗಿದ್ದ ಅಲಂಕಾರ.
೧೭ಕೆಕೆಆರ್೨
ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದಲ್ಲಿನ ಸೋಮೇಶ್ವರ ದೇವರಿಗೆ ಪೂಜಿಸಲು ಸೋಮವಾರ ಸ್ಥಳಾವಕಾಶವಿಲ್ಲದೆ ಭಕ್ತರು ಹೊರಾಲಯದಲ್ಲಿ ಪೂಜಿಸುತ್ತಿರುವ ಭಕ್ತರು.

ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದಲ್ಲಿ ಸೋಮೇಶ್ವರ ದೇವರಿಗೆ ಪೂಜಿಸಲು ಸೋಮವಾರ ಸ್ಥಳಾವಕಾಶವಿಲ್ಲದೆ ಭಕ್ತರು ಹೊರಾಲಯದಲ್ಲಿ ಪೂಜಿಸುತ್ತಿರುವ ಭಕ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.