ಹಲಗೂರು: ಸಮೀಪದ ಡಿ.ಹಲಸಹಳ್ಳಿ ಗೇಟ್ ಬಳಿಯ ದೇವರಾಜು ಅವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ನಾಲ್ಕು ಮೇಕೆಗಳನ್ನು ಕಳ್ಳರು ಇತ್ತೀಚೆಗೆ ಹೊತ್ತೊಯ್ದಿದ್ದಾರೆ.
ಸಮೀಪದ ರಾಷ್ಟ್ರೀಯ ಹೆದ್ದಾರಿ-948 ರಸ್ತೆ ಬದಿಯಲ್ಲಿರುವ ಬಸವನಪುರ ಗ್ರಾಮದ ದೇವರಾಜು ಒಂದು ಎಕರೆ ಜಮೀನು ಹೊಂದಿದ್ದು, ಮನೆ ನಿರ್ಮಿಸಿಕೊಂಡು, ಕುಟುಂಬದೊಂದಿಗೆ ವಾಸವಾಗಿದ್ದರು.
‘ಮಾರ್ಚ್ 3ರಂದು ಮಧ್ಯರಾತ್ರಿ ಮನೆಯಲ್ಲಿದ್ದ ನಾಯಿ ಬೊಗಳುವ ಶಬ್ದ ಕೇಳಿ ಆಚೆ ನೋಡಿದಾಗ ಬಿಳಿ ಬಣ್ಣದ ಟಾಟಾ ಸುಮೋ ಕಾರಿನಲ್ಲಿ ಬಂದಿದ್ದ ಆರು ಕಳ್ಳರು ಮೇಕೆಗಳನ್ನು ಕಾರಿಗೆ ಹಾಕಿಕೊಳ್ಳುತ್ತಿರುವುದನ್ನು ಕಾಣಿಸಿತು. ಮನೆಯಿಂದ ಹೊರ ಬರುವಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದಾರೆ. ಕೊಟ್ಟಿಗೆಯಲ್ಲಿ ಮೇಕೆ ಶೆಡ್ಡಿನ ಬೀಗ ಹೊಡೆದು ಹಾಕಲಾಗಿತ್ತು. ನಾಲ್ಕು ಮೇಕೆಗಳು ಇರಲಿಲ್ಲ’ ಎಂದು ದೇವರಾಜು ದೂರಿನಲ್ಲಿ ತಿಳಿಸಿದ್ದಾರೆ.
ಜೀವನೋಪಾಯಕ್ಕಾಗಿ ಮೇಕೆ ಸಾಕಾಣಿಕೆ ಮಾಡಿಕೊಂಡು ಜೀವನ ಮಾಡುತ್ತಿದ್ದೆವು. ಕಳ್ಳತನದಿಂದಾಗಿ ₹60 ಸಾವಿರ ನಷ್ಟವಾಗಿದೆ ಎಂದು ದೇವರಾಜು ‘ಪ್ರಜಾವಾಣಿ’ ಜೊತೆ ಅಳಲು ತೋಡಿಕೊಂಡರು
ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.