ADVERTISEMENT

ಗುಂಡಾಪುರ: ಲಕ್ಷ ದೀಪೋತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 6:02 IST
Last Updated 18 ನವೆಂಬರ್ 2025, 6:02 IST
ಬೆಟ್ಟದ ಅರಸಮ್ಮ ದೇವಿ
ಬೆಟ್ಟದ ಅರಸಮ್ಮ ದೇವಿ   

ಹಲಗೂರು: ಕಾರ್ತೀಕ ಮಾಸದ ಪ್ರಯುಕ್ತ ಸಮೀಪದ ಗುಂಡಾಪುರ ಗ್ರಾಮದ ಬೆಟ್ಟದ ಅರಸಮ್ಮ ದೇವಾಲಯದಲ್ಲಿ ನ.18ರಂದು ಸಂಜೆ ಲಕ್ಷ ದೀಪೋತ್ಸವ ನಡೆಯಲಿದೆ.

ಅಂದು ಬೆಳಿಗ್ಗೆ ಬೆಟ್ಟದ ಅರಸಮ್ಮ ದೇವಾಲಯದಲ್ಲಿ ದೇವಿಗೆ ಹೂವಿನ ಅಲಂಕಾರ, ಗಣಪತಿ ಪೂಜೆ, ಪಂಚಾಮೃತ, ಅಭಿಷೇಕ ಮತ್ತು ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿವೆ. ಸಂಜೆ 7ಕ್ಕೆ ದೇವಾಲಯದ ಅವರಣದಲ್ಲಿ ಲಕ್ಷ ದೀಪೋತ್ಸವ ಏರ್ಪಡಿಸಿದ್ದು, ಸುತ್ತಮುತ್ತಲ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಪೂಜೆಯ ನಂತರ ಅನ್ನ ಪ್ರಸಾದ ವಿತರಣೆ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT