
ಹಲಗೂರು: ಕೆಎಸ್ಆರ್‌ಟಿಸಿ ಬಸ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಮುತ್ತತ್ತಿ ಬಳಿಯ ಕೆಸರಕ್ಕಿ ಹಳ್ಳದ ಬಳಿ ಸಂಭವಿಸಬಹುದಾಗಿದ್ದ ಅವಘಡ ತಪ್ಪಿತು.
ಕನಕಪುರ ಘಟಕಕ್ಕೆ ಸೇರಿದ ಬಸ್‌ನಲ್ಲಿ 40ಕ್ಕೂ ಹೆಚ್ಚು ಭಕ್ತರು ಶನಿವಾರ ಮಧ್ಯಾಹ್ನ ಮುತ್ತತ್ತಿಗೆ ತೆರಳುತ್ತಿದ್ದರು. ಕೆಸರಕ್ಕಿ ಹಳ್ಳದ ತಿರುವಿನಲ್ಲಿ ಬಸ್ಸಿನ ಬ್ರೆಕ್ ವಿಫಲವಾಯಿತು. ತಕ್ಷಣ ಜಾಗೃತಗೊಂಡ ಚಾಲಕ ಜಯರಾಜ್ ಪ್ರಯಾಣಿಕರಿಗೆ ಬ್ರೇಕ್ ವಿಫಲಗೊಂಡಿರುವ ವಿಷಯ ತಿಳಿಸಿ ಹೆದರದೇ ಗಟ್ಟಿಯಾಗಿ ಹಿಡಿದುಕೊಳ್ಳಲು ಸೂಚಿಸಿದ್ದಾರೆ.
ನಂತರ ಚಾಲಕ ರಸ್ತೆಯ ಬದಿಯಲ್ಲಿದ್ದ ಚಿಕ್ಕ ಕಲ್ಲು ಗುಡ್ಡೆ ಹತ್ತಿಸಿ, ಬಸ್ ನಿಲ್ಲಿಸಿದ್ದಾನೆ. ಅವಘಡದಲ್ಲಿ ಬಸ್‌ನ ಗಾಜು ಪುಡಿಪುಡಿಯಾಗಿದೆ. ಪ್ರಯಾಣಿಕರಿಗೆ ಹೆಚ್ಚಿನ ನೋವುಗಳು ಸಂಭವಿಸಿಲ್ಲ. ನಿರ್ವಾಹಕಿ ಸೌಜನ್ಯ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹಲಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.