
ಸಂಕೀರ್ತನಾ ಯಾತ್ರೆ
(ಪ್ರಾತಿನಿಧಿಕ ಚಿತ್ರ)
ಶ್ರೀರಂಗಪಟ್ಟಣ: ಹಿಂದೂ ಜಾಗರಣ ವೇದಿಕೆ ಬುಧವಾರ ಆಯೋಜಿಸಿದ್ದ ಮೂಡಲ ಬಾಗಿಲು ಹನುಮಾನ್ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆಯಿಂದ ಶ್ರೀರಂಗಪಟ್ಟಣ ಕೇಸರಿಮಯವಾಗಿತ್ತು. ಜೈಶ್ರೀರಾಮ್, ಜೈ ಹನುಮಾನ್ ಘೋಷಣೆಗಳು ಮೊಳಗಿದವು.
ಜ್ಯೋತಿಷಿ ವಿ. ಭಾನುಪ್ರಕಾಶ್ ಶರ್ಮಾ ಯಾತ್ರೆಗೆ ಚಾಲನೆ ನೀಡಿದರು. ಯಾತ್ರೆ ಪ್ರಮುಖ ರಸ್ತೆಗಳಲ್ಲಿ ಸಾಗಿ ಶ್ರೀರಂಗನಾಥಸ್ವಾಮಿ ದೇವಾಲಯ ತಲುಪಿತು.
ಯಾತ್ರೆಯು ಜಾಮಿಯಾ ಮಸೀದಿ ಬಳಿ ಬರುತ್ತಿದ್ದಂತೆಯೇ ಮಾಲಾಧಾರಿಗಳು, ‘ಮಂದಿರವಲ್ಲೇ ಕಟ್ಟುವೆವು...’ ಎಂದು ಘೋಷಣೆ ಕೂಗಿದರು. ಆಗ ಪೊಲೀಸರು ಮತ್ತು ಮಾಲಾಧಾರಿಗಳ ನಡುವೆ ತಳ್ಳಾಟವೂ ನಡೆಯಿತು.
ಮಾಲಾಧಾರಿಗಳ ಸಭೆಯಲ್ಲಿ ಮಾತನಾಡಿದ ವೇದಿಕೆಯ ವಿಭಾಗೀಯ ಸಂಚಾಲಕ ಲೋಹಿತರಾಜ್ ಅರಸ್, ‘ಜಾಮಿಯಾ ಮಸೀದಿಯ ಜಾಗದಲ್ಲಿ ಹನುಮನ ಮಂದಿರ ಇದ್ದದ್ದು ನಿಜ. ಮತ್ತೆ ಮಂದಿರ ನಿರ್ಮಿಸಿ ಹನುಮನನ್ನು ಪ್ರತಿಷ್ಠಾಪಿಸುತ್ತೇವೆ’ ಎಂದರು. ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.