ADVERTISEMENT

ಮಂಡ್ಯ | 'ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಲಿ'

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರದಲ್ಲಿ ಎಸ್‌.ಟಿ.ರಾಮಚಂದ್ರ ಸಲಹೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 4:51 IST
Last Updated 10 ಅಕ್ಟೋಬರ್ 2025, 4:51 IST
ಮಂಡ್ಯ ನಗರದ ಪಿಇಎಸ್‌ ಕಾಲೇಜಿನಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಎಸ್.ಟಿ.ರಾಮಚಂದ್ರ ಅವರು ಮಾತನಾಡಿದರು
ಮಂಡ್ಯ ನಗರದ ಪಿಇಎಸ್‌ ಕಾಲೇಜಿನಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಎಸ್.ಟಿ.ರಾಮಚಂದ್ರ ಅವರು ಮಾತನಾಡಿದರು   

ಮಂಡ್ಯ: ‘ಬ್ಯಾಂಕಿನಲ್ಲಿ ಅನ್ಯ ಭಾಷಿಗರೇ ಹೆಚ್ಚಿರುವುದು ಕಂಡು ಬರುತ್ತಿದೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿಯೂ ಕೆಲಸ ಮಾಡುವ ಕನ್ನಡಿಗರ ಸಂಖ್ಯೆ ಹೆಚ್ಚಬೇಕು’ ಎಂದು ಮಂಡ್ಯ ಕೃಷಿಕ್‌ ಸರ್ವೋದಯ ಟ್ರಸ್ಟ್‌ ಜಂಟಿ ಕಾರ್ಯದರ್ಶಿ ಎಸ್‌.ಟಿ.ರಾಮಚಂದ್ರ ಸಲಹೆ ನೀಡಿದರು.

ನಗರದ ಪಿಇಎಸ್‌ ಕಾಲೇಜಿನ ವಿವೇಕಾನಂದ ರಂಗಮಂದಿರದಲ್ಲಿ ಕೃಷಿಕ್‌ ಸರ್ವೋದಯ ಟ್ರಸ್ಟ್‌ ವತಿಯಿಂದ ಗುರುವಾರ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ಹಾಗೂ ಬ್ಯಾಂಕಿಂಗ್ ಉದ್ಯೋಗಗಳ ಬಗ್ಗೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಬ್ಯಾಂಕ್‌ಗಳು ದೇಶದ ಬೆನ್ನೆಲುಬಾಗಿವೆ. ವಿದ್ಯಾವಂತರಿಗೆ ಅಥವಾ ನಿರುದ್ಯೋಗಸ್ಥರಿಗೆ ಭದ್ರತೆ ಇಲ್ಲದೇ ಬ್ಯಾಂಕಿನಲ್ಲಿ ಸಿಗುವ ಸಾಲಸೌಲಭ್ಯದ ಕುರಿತು ಮಾಹಿತಿ ಪಡೆದುಕೊಳ್ಳಬೇಕು. ಬ್ಯಾಂಕುಗಳ ಕೇವಲ ಹಣಕಾಸು ವ್ಯವಹಾರ ಮಾಡುವ ಕೇಂದ್ರಗಳಲ್ಲ. ಅವು ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ, ಕೃಷಿ ಸಾಲ ವಿತರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ’ ಎಂದರು.

ADVERTISEMENT

ಅಂತಿಮ ಪ‍ದವಿ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್‌ ವಿಷಯ ಸೇರಿದಂತೆ ಹಲವು ಪ್ರೊಬೆಷನರಿ ಉದ್ಯೋಗಗಳಿಗೆ ಸಂಬಂಧಿಸಿದಂತೆ  ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವುದಕ್ಕೆ ನಮ್ಮ ಕೃಷಿಕ್‌ ಸರ್ವೋದಯ ಟ್ರಸ್ಟ್‌ ಎಲ್ಲ ಸೌಲಭ್ಯವನ್ನು ಕೊಡುವ ಮೂಲಕ ತರಬೇತಿ ನೀಡುತ್ತಿರುವುದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಪಿಇಟಿ ಟ್ರಸ್ಟ್‌ನ ಕಾರ್ಯಾಧ್ಯಕ್ಷ ರಾಮಲಿಂಗಯ್ಯ ಅವರು, ಕೃಷಿಕ್ ಟ್ರಸ್ಟ್‌ನಲ್ಲಿ ಪರೀಕ್ಷಾರ್ಥಿಗಳಿಗೆ ದೊರಿಯುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ತರಬೇತಿ ಕಾರ್ಯಾಗಾರದಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು. ಕಾರ್ಯಕ್ರಮದಲ್ಲಿ ಟ್ರಸ್ಟಿನ ಪಧಾದಿಕಾರಿಗಳಾದ ಬೋರಯ್ಯ, ಮಾದಯ್ಯ, ಲೋಕೇಶ್, ದೇವರಾಜ್, ಕಾಲೇಜಿನ ಪ್ರಾಂಶುಪಾಲ ನಿಲಕಂಠ ಅವರು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.