ADVERTISEMENT

ಕಾವೇರಿ ನದಿಯಲ್ಲಿ ನೀರು ನಾಯಿಗಳು ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 14:25 IST
Last Updated 19 ಆಗಸ್ಟ್ 2025, 14:25 IST
   

ಶ್ರೀರಂಗ‍ಪಟ್ಟಣ: ಇಲ್ಲಿನ ಕಾವೇರಿ ನದಿಯಲ್ಲಿ ಅಳಿವಿನ ಅಂಚಿನಲ್ಲಿರುವ ನೀರು ನಾಯಿಗಳು ಮಂಗಳವಾರ ಗೋಚರಿಸಿದವು.

ಪಟ್ಟಣದ ವೆಲ್ಲೆಸ್ಲಿ ಸೇತುವೆಯ ಪೂರ್ವ ಭಾಗದಲ್ಲಿ ನೀರಿನಲ್ಲಿ ಈಜಾಡುತ್ತಿದ್ದ ಈ ನೀರು ನಾಯಿಗಳನ್ನು ಜನರು ಕುತೂಹಲದಿಂದ ವೀಕ್ಷಿಸಿದರು. ಏಳೆಂಟು ನೀರು ನಾಯಿಗಳ ಗುಂಪು ನದಿಯ ಮೇಲ್ಮುಖವಾಗಿ ಈಜುತ್ತಾ ಬಂದವು.

ನೀರಿನಲ್ಲಿ ಮುಳುಗೇಳುತ್ತಾ ಚಿನ್ನಾಟವಾಡುತ್ತಿದ್ದುದನ್ನು ಕಂಡು ಜನರು ಖುಷಿಪಟ್ಟರು. ಕೆಲವರು ಮೊಬೈಲ್‌ಗಳಲ್ಲಿ ಫೋಟೊ ಕ್ಲಿಕ್ಕಿಸಿಕೊಂಡರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.