ADVERTISEMENT

ಮಂಡ್ಯ ಜಿಲ್ಲೆಗೆ ಸರ್ಕಾರವೇ ಸೋಂಕು ಹರಡುತ್ತಿದೆ: ಕುಮಾರಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 1 ಮೇ 2020, 8:34 IST
Last Updated 1 ಮೇ 2020, 8:34 IST
   

ಬೆಂಗಳೂರು:ಸರ್ಕಾರವೇ ಈ ಹಿಂದೆ ರಾಮನಗರಕ್ಕೆ ಕೊರೊನಾವೈರಸ್‌ತಂದಿಟ್ಟಿತ್ತು. ಈಗ ಮಂಡ್ಯಕ್ಕೆ ತಂದಿದೆ. ಮುಂಬೈಯಿಂದ ಸೋಂಕನ್ನು ತರುವ ಮೂಲಕ ಗ್ರೀನ್‌ಜೋನ್‌ನಲ್ಲಿದ್ದ ಜಿಲ್ಲೆಗೆ ಸರ್ಕಾರವೇ ಸೋಂಕುಹರಡುತ್ತಿದೆ. ಇದರ ಹಿಂದೆ ರಾಜಕೀಯ ನಡೆಯುತ್ತಿರುವಶಂಕೆ ಇದೆಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು

ಮಂಡ್ಯಕ್ಕೆ ತಂದ ಮೃತ ವ್ಯಕ್ತಿಯ ಶವದ ಜೊತೆ ಬಂದವರಲ್ಲಿ ಐವರಿಗೆ ಕೋವಿಡ್–19 ದೃಢಪಟ್ಟಿದೆ.ಮಂಡ್ಯಜಿಲ್ಲೆಗೆ ಮುಂಬೈಯಿಂದ 7-8 ಸಾವಿರ ಮಂದಿ ಬಂದಿದ್ದಾರೆ. ಅವರನ್ನು ಸರಿಯಾದ ರೀತಿಯಲ್ಲಿಕ್ವಾರಂಟೈನ್ ಮಾಡಿಲ್ಲ. ಮಂಡ್ಯದ ಜನರು ಸಂಕಷ್ಟಕ್ಕೆ ಸಿಲುಕುವ ದಿನಗಳು ಬರಲಿವೆ.ಜಿಲ್ಲಾಡಳಿತದ ನಿರ್ಲಕ್ಷ್ಯ ಮನೋಭಾವವೇ ಕೊರೊನಾವೈರಸ್ ಹರಡಲು ಕಾರಣವಾಗಲಿದೆಎಂದು ಶುಕ್ರವಾರ ದೇವನಹಳ್ಳಿ ಪಟ್ಟಣದಲ್ಲಿ ದೂರಿದರು.

ಮೃತರು ಕೊರೊನಾದಿಂದ ಸತ್ತಿದ್ದಾರೋ ಇಲ್ಲವೋ ಎಂಬುದು ತಿಳಿದಿಲ್ಲ. ಆದರೆ, ನಕಲಿ ದಾಖಲೆಸೃಷ್ಟಿಸಿ ಮೃತದೇಹವನ್ನು ತರಲಾಗಿದೆ. ಸರ್ಕಾರ ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿದೆ. ರಾಜ್ಯದಲ್ಲಿ ಈ ರೀತಿ ಸಮಸ್ಯೆಗಳು ಉಂಟಾಗಬಾರದು ಎಂದುಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.