ADVERTISEMENT

ಪ್ರೇಮ ವಿವಾಹ: ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 2:52 IST
Last Updated 22 ಫೆಬ್ರುವರಿ 2026, 2:52 IST
ಚುಂಚಗಹಳ್ಳಿಯಲ್ಲಿ ಭಾಗಶಃ ಸುಟ್ಟು ಹೋಗಿರುವ ವಿನೋದ್ ಮನೆ
ಚುಂಚಗಹಳ್ಳಿಯಲ್ಲಿ ಭಾಗಶಃ ಸುಟ್ಟು ಹೋಗಿರುವ ವಿನೋದ್ ಮನೆ   

ಮದ್ದೂರು (ಮಂಡ್ಯ ಜಿಲ್ಲೆ): ತಮ್ಮ ‌ಒಪ್ಪಿಗೆ ಇಲ್ಲದೆ ಮಗಳನ್ನು ಮದುವೆಯಾದ ಸಂಬಂಧಿ ಯುವಕನ ಮನೆಗೆ ಆಕೆಯ ತಂದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ತಾಲ್ಲೂಕಿನ ಚುಂಚಗಹಳ್ಳಿಯಲ್ಲಿ ನಡೆದಿದೆ.

ಶನಿವಾರ ಘಟನೆ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಗ್ರಾಮದ ವಿನೋದ್ ಹಾಗೂ ಕಾವ್ಯ ಪ್ರೀತಿಸುತ್ತಿದ್ದು, ಗುರುವಾರ ನಾಪತ್ತೆಯಾಗಿದ್ದರು. ಶುಕ್ರವಾರ ಮದುವೆಯಾಗಿದ್ದರು. 

ಹುಡುಗಿಯ ತಂದೆ, ಆರೋಪಿ ಚನ್ನೇಗೌಡ ಬೆಳಗ್ಗೆ 10.30ರಲ್ಲಿ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಅವರಿಗೂ ಗಾಯಗಳಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.  

ADVERTISEMENT

ಮನೆ ಭಾಗಶಃ ಸುಟ್ಟಿದ್ದು, ಬಹುತೇಕ ವಸ್ತುಗಳಿಗೆ ಹಾನಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಸಿಪಿಐ ನವೀನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಪ್ರಕರಣ ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.