ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಮಡಿವಾಳ ಮಾಚಿದೇವರ ಕ್ಷೇಮಾಭಿವೃದ್ಧಿ ಸಂಘ ಶನಿವಾರ ಏರ್ಪಡಿಸಿದ್ದ ಮಡಿವಾಳ ಮಾಚಿದೇವರ ಜಯಂತಿಯಲ್ಲಿ ದಸರಾ ಕುಮಾರ ಪ್ರಶಸ್ತಿ ಪುರಸ್ಕೃತ ಪೈ. ಗಿರೀಶ್, ಪಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಲೀಲಾವತಿ, ಗ್ರಾಮ ಸೇವಕರಾದ ಅನಿಲ್ ಹಾಗೂ ಪುಟ್ಟಸ್ವಾಮಿ ಅವರಿಗೆ ಮಾಚಿದೇವರ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಮಡಿವಾಳ ಮಾಚಿದೇವರ ಕ್ಷೇಮಾಭಿವೃದ್ಧಿ ಸಂಘ ಶನಿವಾರ ಏರ್ಪಡಿಸಿದ್ದ ಮಡಿವಳ ಮಾಚಿದೇವರ ಜಯಂತಿಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಮಡಿವಾಳ ಮಾಚಿದೇವರ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಮೈಸೂರು ದಸರಾ ಉತ್ಸವದ ಕುಸ್ತಿ ಪಂದ್ಯಾವಳಿಯಲ್ಲಿ ‘ದಸರಾ ಕುಮಾರ’ ಪ್ರಶಸ್ತಿ ಪಡೆದಿರುವ ಪೈ. ಗಿರೀಶ್, ಪಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಲೀಲಾವತಿ, ಗ್ರಾಮ ಸೇವಕರಾದ ಅನಿಲ್ ಹಾಗೂ ಪುಟ್ಟಸ್ವಾಮಿ ಅವರಿಗೆ ಮಾಚಿದೇವರ ಪ್ರಶಸ್ತಿಯನ್ನು ಜೆಡಿಎಸ್ ಮುಖಂಡ ಪೈ.ಮುಕುಂದ ಪ್ರದಾನ ಮಾಡಿದರು.
ಮಡಿವಳ ಮಾಚಿದೇವರ ಹೆಸರಿನಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ‍್ರತಿ ವರ್ಷ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕಾಯಕ ಜೀವಿಗಳನ್ನು ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ಅವರಿಗೆ ಮತ್ತಷ್ಟು ಸ್ಪೂರ್ತಿ ತುಂಬಲಾಗುತ್ತಿದೆ. ಇಂತಹ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಪೈ.ಮುಕುಂದ ಹೇಳಿದರು.
ಮಡಿವಾಳ ಮಾಚಿದೇವರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮರಳಾಗಾಲ ಮಂಜುನಾಥ್ ಮಾತನಾಡಿ, ಎಲೆಮರೆ ಕಾಯಿಯಂತೆ ಇದ್ದು ಕಾಯಕ ಮಾಡುವವರನ್ನು ಸಂಘವು ಗುರುತಿಸಿ ಗೌರವಿಸಿದೆ. ಆ ಮೂಲಕ ಶರಣ ಶ್ರೇಷ್ಠ ಮಡಿವಾಳ ಮಾಚಿದೇವರಿಗೆ ಆಶಯದಂತೆ ನಡೆದುಕೊಳ್ಳುತ್ತಿದ್ದೇವೆ ಎಂದರು. ಕರುನಾಡ ರಕ್ಷಣಾ ಪಡೆ ಅಧ್ಯಕ್ಷೆ ಪ್ರಿಯಾ ರಮೇಶ್, ಗ್ರಾ.ಪಂ. ಸದಸ್ಯ ಟೆಂಪೋ ಪ್ರಕಾಶ್, ಪ್ರಗತಿಪರ ರೈತರ ರೇಡಿಯೋ ರಮೇಶ್, ಪೈ. ಉಮೇಶ್, ಶಿಕ್ಷಕ ಕುಮಾರ್, ಮುಖಂಡರಾದ ಸಂಜೀವಣ್ಣ, ಮೀಸೆ ನಾಗಣ್ಣ, ನರಸಿಂಹ, ಪ್ರಕಾಶ್, ಕುಮಾರಸ್ವಾಮಿ, ಗೋವಿಂದು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.