ಮಂಡ್ಯ: ‘ಸಮಾಜವನ್ನು ಸತ್ಯ ಮತ್ತು ಶಾಂತಿಯ ಕಡೆ ಕೊಂಡೊಯ್ದ ಮಹಾನ್ ಚೇತನ ವರ್ಧಮಾನ ಮಹಾವೀರ’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.
ನಗರದ ಜೈನ ಬೀದಿಯಲ್ಲಿರುವ ಅನಂತನಾಥ ಸ್ವಾಮಿ ದೇವಾಲಯ (ದಿಗಂಬರ ದೇವಾಲಯ) ವತಿಯಿಂದ ಗುರುವಾರ ನಡೆದ ಮಹಾವೀರ ಜಯಂತಿಯ ಮೆರವಣಿಗೆ ಕಾರ್ಯಕ್ರಮದಲ್ಲಿ ಮಹಾವೀರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಜಗತ್ತಿಗೆ ಅಧ್ಯಾತ್ಮದ ಚಿಂತನೆಯನ್ನು ಜೈನ ಧರ್ಮದ 24ನೇ ತೀರ್ಥಂಕರರಾದ ಮಹಾವೀರರು ನೀಡಿದ್ದಾರೆ. ಮಹಾವೀರರ ತತ್ವ, ಮೌಲ್ಯ ಮತ್ತು ಅವರು ಬೋಧಿಸಿದ 5 ಪಂಚಶೀಲ ತತ್ವಗಳಾದ ಸತ್ಯ, ಅಹಿಂಸೆ, ಅಪರಿಗ್ರಹ (ಅನಾಸಕ್ತಿ), ಆಸ್ತೇಯ (ಕದಿಯದಿರುವುದು) ಮತ್ತು ಬ್ರಹ್ಮಚರ್ಯವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಸುಖ ಶಾಂತಿಯಿಂದ ಸಹಬಾಳ್ವೆಯಿಂದ ಜೀವನ ನಡೆಸಬಹುದು ಎಂದು ಹೇಳಿದರು.
ಅದ್ದೂರಿ ಮೆರವಣಿಗೆ:
ಮೆರವಣಿಗೆಯು ಮಂಡ್ಯ ನಗರದ ಪೇಟೆ ಬೀದಿ ಮೂಲಕ ನಂದಾ ವೃತ್ತ, ಮೈಸೂರು ರಸ್ತೆಯಲ್ಲಿ ಸಾಗಿ ಮೂಲಸ್ಥಾನ ದೇವಾಲಯಕ್ಕೆ ಮರಳಿತು. ಬ್ಯಾಂಡ್ ಸೆಟ್ ಮೆರವಣಿಗೆಯಲ್ಲಿ ಗಮನ ಸೆಳೆಯಿತು.
ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ನಗರಸಭೆ ಅಧ್ಯಕ್ಷ ಎಂ.ವಿ. ಪ್ರಕಾಶ್, ಜೈನ ಸಮುದಾಯದ ಅಧ್ಯಕ್ಷರಾದ ಶಾಂತಿ ಪ್ರಸಾದ್ ಜೈನ್, ರಾಕೇಶ್ ಜೈನ್ ಶ್ರೀಧರ್ ಜೈನ್, ಶಶಿಧರ್ ಜೈನ್, ಪದ್ಮನಾಭ ಜೈನ್ ಇನ್ನಿತರರು ಪಾಲ್ಗೊಂಡಿದ್ದರು.
ಸತ್ಯ ಮತ್ತು ಅಹಿಂಸೆ ಬೋಧಿಸಿದ ಮಹಾವೀರ ಮಹಾವೀರ ಪುತ್ಥಳಿಗೆ ಗಣ್ಯರಿಂದ ಪುಷ್ಪ ನಮನ ಶಾಂತಿ, ಸಹಬಾಳ್ವೆಯೇ ಜೀವನ ಸಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.