ADVERTISEMENT

ಮಂಡ್ಯ ಬಸ್‌ ದುರಂತ: ಮೃತಪಟ್ಟವರ ಸಂಖ್ಯೆ 30ಕ್ಕೆ ಏರಿಕೆ

ಬಸ್ ಸ್ಟೇರಿಂಗ್ ತುಂಡಾಗಿದ್ದೇ ಈ ಅವಘಡಕ್ಕೆ ಕಾರಣ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2018, 15:58 IST
Last Updated 24 ನವೆಂಬರ್ 2018, 15:58 IST
ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. – ಟ್ವಿಟರ್‌ ಚಿತ್ರ
ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. – ಟ್ವಿಟರ್‌ ಚಿತ್ರ   

ಮಂಡ್ಯ: ಪಾಂಡವಪುರ ಸಮೀಪದ ಕನಗನಮರಡಿ ಗ್ರಾಮದ ಹತ್ತಿರವಿ.ಸಿ. ನಾಲೆಗೆಖಾಸಗಿ ಬಸ್‌ ಉರುಳಿದ ಪರಿಣಾಮಶಾಲಾ ವಿದ್ಯಾರ್ಥಿಗಳೂಸೇರಿದಂತೆ 30ಮಂದಿ ಮೃತಪಟ್ಟಿದ್ದಾರೆ.

ಉರುಳಿದ ಬಸ್‌ನಲ್ಲಿದ್ದ ವಿದ್ಯಾರ್ಥಿ ಲೋಹಿತ್ ಮತ್ತು ಪ್ರಯಾಣಿಕ ಗಿರೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಮಧ್ಯಾಹ್ನ ಸುಮಾರು 12.30ಕ್ಕೆ ದುರಂತ ಸಂಭವಿಸಿದೆ. 'ರಾಜ್‌ಕುಮಾರ್' ಹೆಸರಿನ ಬಸ್‌ ನೀರಿನಲ್ಲಿ ಸಂಪೂರ್ಣ ಮುಳುಗಿದೆ. ವಿಷಯ ತಿಳಿದ ತಕ್ಷಣಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಹಗ್ಗ ಮತ್ತು ಕ್ರೇನ್‌ ಸಹಾಯದಿಂದ ಈವರೆಗೆ 25ಕ್ಕೂಮೃತದೇಹಗಳನ್ನು ಹೊರ ತೆಗೆಯಲಾಗಿದೆ.

ADVERTISEMENT

ಬಸ್ಸ್ಟೇರಿಂಗ್ ತುಂಡಾಗಿದ್ದು ಅವಘಡಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಬಸ್ಸಿನಲ್ಲಿ ಸುಮಾರು 30 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದೆ. ಪ್ರಸ್ತುತಕೆಆರ್‌ಎಸ್‌ ಜಲಾಶಯದಿಂದವಿ.ಸಿ. ನಾಲೆಗೆ ಹರಿಬಿಡುತ್ತಿದ್ದ ನೀರನ್ನು ನಿಲ್ಲಿಸಲಾಗಿದೆ.

ಬಸ್‌ ಪಾಂಡವಪುರದಿಂದ ಮಂಡ್ಯಕ್ಕೆ ತೆರಳುತ್ತಿತ್ತು. ನಾಲೆಗೆ ತಡೆಗೋಡೆ ಇರಲಿಲ್ಲ. ಆಳವಾದ ನಾಲೆಯಲ್ಲಿ ನೀರು ತುಂಬಿಕೊಂಡಿದ್ದರಿಂದಬಸ್ಸು ಸಂಪೂರ್ಣ ಮುಳುಗಿದೆ.

ಗಾಜು ಒಡೆದು ಹೊರಬಂದೆ: 'ನಾನು ಬಸ್ಸಿನ ಹಿಂಭಾಗದಲ್ಲಿದ್ದೆ. ನಾಲೆಗೆ ಬಸ್‌ ಬಿದ್ದ ತಕ್ಷಣ ನೀರು ನುಗ್ಗಲು ಆರಂಭಿಸಿತು. ಗಾಜು ಒಡೆದು ಹೊರಬಂದೆ. ಈ ವೇಳೆ ಮೇಲೆ ಬರಲು ಯತ್ನಿಸುತ್ತಿದ್ದಬಾಲಕನೊಬ್ಬ ಕಾಣಿಸಿದ. ಅವನನ್ನೂ ಹಿಡಿದುಕೊಂಡು ಈಜಿ ಮೇಲೆ ಬಂದೆ' ಎಂದುಅಪಘಾತಕ್ಕೀಡಾದ ಬಸ್ಸಿನಲ್ಲಿದ್ದ ಪ್ರಯಾಣಿಕ ಗಿರೀಶ್ ಅವರ ಹೇಳಿಕೆ ಉಲ್ಲೇಖಿಸಿ 'ಫಸ್ಟ್‌ನ್ಯೂಸ್' ಜಾಲತಾಣ ವರದಿ ಮಾಡಿದೆ.

₹5 ಲಕ್ಷ ಪರಿಹಾರ: ಮೃತಪಟ್ಟವರ ಕುಟುಂಬಸ್ಥರಿಗೆ ₹5 ಲಕ್ಷಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ತಿಳಿಸಿದರು.

ನೀರಿನಲ್ಲಿ ಮುಳುಗಿರುವ ಬಸ್‌ನಲ್ಲಿದ್ದವರ ರಕ್ಷಣೆಯಲ್ಲಿ ಸ್ಥಳೀಯರು ತೊಡಗಿದ್ದಾರೆ
ಹೊರ ತೆಗೆಯಲಾದ ಮೃತದೇಹಗಳು

ಮೃತರ ವಿವರಗಳು

1. ಚಂದ್ರು (35 ವರ್ಷ),ಚಿಕ್ಕಕೊಪ್ಪಲು
2.ಪವಿತ್ರ (11 ವರ್ಷ), ವದೇಸಮುದ್ರ
3. ಈರಯ್ಯ (60 ವರ್ಷ), ಬೇಬಿ ಗ್ರಾಮ
4. ಕಲ್ಪನ (11 ವರ್ಷ), ಕೋಡಿಶೆಟ್ಟಿಪುರ
5. ದೇವರಾಜು (40 ವರ್ಷ), ಕೋಡಿಶೆಟ್ಟಿಪುರ
6. ಕರಿಯಪ್ಪ (65 ವರ್ಷ), ವದೇಸಮುದ್ರ
7. ಚಿಕ್ಕಯ್ಯ (60 ವರ್ಷ), ವದೇಸಮುದ್ರ
8. ಪ್ರೀತಿ (15 ವರ್ಷ),ಭುಜವಳ್ಳಿ
9. ಪಾಪಣ್ಣ (66 ವರ್ಷ), ಚಿಕ್ಕಕೊಪ್ಪಲು
10. ಸಾವಿತ್ರಮ್ಮ (40 ವರ್ಷ), ಬೂಕನಕೆರೆ
11. ಮಂಜುಳ (60 ವರ್ಷ), ಡಾಮಡಹಳ್ಳಿ
12. ಅನುಷ (17 ವರ್ಷ), ಗಾಣದ ಹೊಸೂರು
13. ಕಮಲಮ್ಮ (55 ವರ್ಷ), ವದೇಸಮುದ್ರ
14. ಸುಮತಿ (35 ವರ್ಷ), ಹುಲ್ಕೆರೆ
15. ಯಶೋಧ (18 ವರ್ಷ),ಚಿಕ್ಕಕೊಪ್ಪಲು
16. ಸೌಮ್ಯ (05 ವರ್ಷ), ಕೋಡಿಶೆಟ್ಟಿಪುರ
17. ಪ್ರಶಾಂತ್ (15 ವರ್ಷ), ವದೇಸಮುದ್ರ
18. ರತ್ನಮ್ಮ (60 ವರ್ಷ), ವದೇಸಮುದ್ರ
19. ಶಶಿಕಲಾ (45 ವರ್ಷ), ವದೇಸಮುದ್ರ
20. ಪೂಜಾರಿ ಕೆಂಪಯ್ಯ (50 ವರ್ಷ), ಚಿಕ್ಕಕೊಪ್ಪಲು
21. ಸೌಮ್ಯ ಉಮೇಶ್ (30 ವರ್ಷ), ಚಿಕ್ಕಾಡೆ
22. ರತ್ಮಮ್ಮ‌w/o ರಾಮಕೃಷ್ಣ (50 ವರ್ಷ) ಕನಗನಮರಡಿ
23. ನಿಂಗಮ್ಮ (70ವರ್ಷ) ಕನಗನಮರಡಿ
24. ರವಿಕುಮಾರ್ (12 ವರ್ಷ) ವದೇಸಮುದ್ರ
25. ಲಿಖಿತ (05ವರ್ಷ) ವದೇಸಮುದ್ರ
26. ಮಣಿ (35ವರ್ಷ) ಹುಲಿಕೆರೆಕೊಪ್ಪಲು
27. ಶಿವಮ್ಮ (50ವರ್ಷ) ಕಟ್ಟೇರಿ
28. ಜಯಮ್ಮ (50ವರ್ಷ) ದೊಡ್ಡಕೊಪ್ಪಲು
29. ದಿವ್ಯ, ಚಿಕ್ಕಕೊಪ್ಪಲು
30. ಪ್ರೇಕ್ಷಾ, (2 ವರ್ಷ), ಡಾಮಡಹಳ್ಳಿ

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.