ADVERTISEMENT

ಮಹಾರಾಷ್ಟ್ರದಲ್ಲಿ ಮಂಡ್ಯ ಜಾನುವಾರುಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 8:01 IST
Last Updated 12 ಫೆಬ್ರುವರಿ 2026, 8:01 IST
<div class="paragraphs"><p>ಮಹಾರಾಷ್ಟ್ರದಲ್ಲಿ ಫೆ.13 ರಿಂದ ನಡೆಯುವ ರಾಷ್ಟ್ರಮಟ್ಟದ ಜಾನುವಾರುಗಳ ಪ್ರದರ್ಶನದಲ್ಲಿ ಭಾಗವಹಿಸಲು ಮಂಡ್ಯ ನಗರದ ಕಲ್ಲಹಳ್ಳಿ ರೈತ ರವಿ ಪಟೇಲ್‌ ಅವರು ಹಳ್ಳಿಕಾರ್‌ ಜೋಡಿ ಎತ್ತು, ಹಳ್ಳಿ ಕಾರ್‌ ಬಿತ್ತನೆ ಹೋರಿ ಹಾಗೂ ಬಂಡೂರು ಕುರಿಗಳ ಜೊತೆ ಪ್ರಯಾಣ ಹೊರಟರು</p></div>

ಮಹಾರಾಷ್ಟ್ರದಲ್ಲಿ ಫೆ.13 ರಿಂದ ನಡೆಯುವ ರಾಷ್ಟ್ರಮಟ್ಟದ ಜಾನುವಾರುಗಳ ಪ್ರದರ್ಶನದಲ್ಲಿ ಭಾಗವಹಿಸಲು ಮಂಡ್ಯ ನಗರದ ಕಲ್ಲಹಳ್ಳಿ ರೈತ ರವಿ ಪಟೇಲ್‌ ಅವರು ಹಳ್ಳಿಕಾರ್‌ ಜೋಡಿ ಎತ್ತು, ಹಳ್ಳಿ ಕಾರ್‌ ಬಿತ್ತನೆ ಹೋರಿ ಹಾಗೂ ಬಂಡೂರು ಕುರಿಗಳ ಜೊತೆ ಪ್ರಯಾಣ ಹೊರಟರು

   

ಮಂಡ್ಯ: ಮಹಾರಾಷ್ಟ್ರದಲ್ಲಿ ಫೆ.13 ರಿಂದ 15 ರವರೆಗೆ ನಡೆಯುವ ರಾಷ್ಟ್ರಮಟ್ಟದ ಜಾನುವಾರುಗಳ ಪ್ರದರ್ಶನದಲ್ಲಿ ಭಾಗವಹಿಸಲು ನಗರದ ಕಲ್ಲಹಳ್ಳಿ ರೈತ ರವಿ ಪಟೇಲ್‌ ಅವರು ಹಳ್ಳಿಕಾರ್‌ ಜೋಡಿ ಎತ್ತು, ಹಳ್ಳಿ ಕಾರ್‌ ಬಿತ್ತನೆ ಹೋರಿ ಹಾಗೂ ಬಂಡೂರು ಕುರಿಗಳ ಜೊತೆ ಬುಧವಾರ ಪ್ರಯಾಣ ಹೊರಟರು.

ರವಿ ಪಟೇಲ್‌ ಮಾತನಾಡಿ, ಹಳ್ಳಿಕಾರ್‌ ತಳಿಗಳ ಮೇಲೆ ಇತರೆ ರಾಜ್ಯಗಳ ರೈತರಿಗೂ ಮಾಹಿತಿ ನೀಡಲು ಸರ್ಕಾರವು ನನಗೆ ಅವಕಾಶ ಕೊಟ್ಟಿದೆ. ಅದಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ರೈತರ ಬಳಿಗೆ ಹಳ್ಳಿಕಾರ್‌ ಎತ್ತುಗಳ ಸಾಕಾಣಿಗೆ ಬಗ್ಗೆ ತಿಳಿಸಿಕೊಡಲು ಉತ್ಸುಕನಾಗಿದ್ದೇನೆ ಎಂದರು.

ADVERTISEMENT

ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದ ರೈತರಾದ ಸಂತೋಷ್‌, ರೇವಣ್ಣ, ಶ್ರೀನಿವಾಸ್‌, ಭಾನುಪ್ರಕಾಶ್‌, ಕಿರಣ್‌ ಪಟೇಲ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.