ADVERTISEMENT

ಮಂಡ್ಯ| ಹೊಸಗಾವಿ ಗ್ರಂಥಾಲಯಕ್ಕೆ ಬೀಗ: ವಿದ್ಯಾರ್ಥಿಗಳು, ಸಾರ್ವಜನಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 6:21 IST
Last Updated 29 ಡಿಸೆಂಬರ್ 2025, 6:21 IST
<div class="paragraphs"><p>ಮದ್ದೂರು ತಾಲ್ಲೂಕಿನ ಕೊಪ್ಪ ಹೋಬಳಿಯ ದೊಡ್ಡ ಹೊಸಗಾವಿಯಲ್ಲಿರುವ ಗ್ರಂಥಾಲಯದ ಸುತ್ತಲೂ ಗಿಡಗಂಟಿ ಬೆಳೆದಿರುವುದು.</p></div>

ಮದ್ದೂರು ತಾಲ್ಲೂಕಿನ ಕೊಪ್ಪ ಹೋಬಳಿಯ ದೊಡ್ಡ ಹೊಸಗಾವಿಯಲ್ಲಿರುವ ಗ್ರಂಥಾಲಯದ ಸುತ್ತಲೂ ಗಿಡಗಂಟಿ ಬೆಳೆದಿರುವುದು.

   

ಮದ್ದೂರು: ತಾಲ್ಲೂಕಿನ ಕೊಪ್ಪ ಹೋಬಳಿಯ ದೊಡ್ಡಹೊಸಗಾವಿಯ ಸಾರ್ವಜನಿಕ ಗ್ರಂಥಾಲಯವು ಹಲವು ತಿಂಗಳಿಂದ ಬಾಗಿಲನ್ನೇ ತೆರೆಯದೆ ಬೀಗ ಹಾಕಿರುವುದರಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಥಳೀಯ ಗ್ರಾ.ಪಂ.ನಿಂದಲೇ ನಿರ್ವಹಣೆ ಮಾಡುತ್ತಿರುವ ಗ್ರಂಥಾಲಯವು ಡಿಜಿಟಲೀಕರಣಗೊಂಡಿದ್ದರೂ ಬಾಗಿಲು ಮುಚ್ಚಿರುವುದರಿಂದ ಗ್ರಾ.ಪಂ. ಅನುದಾನದ ಹಣ ವ್ಯರ್ಥವಾಗುತ್ತಿದೆ. ಗ್ರಂಥಾಲಯದಲ್ಲಿ ಮೂಲ ಸೌಕರ್ಯಗಳ ಕೊರತೆಯೂ ಇದೆ. ಗ್ರಂಥಾಲಯ ಕಟ್ಟಡದ ಸುತ್ತಲೂ ಗಿಡ–ಗಂಟಿ ಬೆಳೆದುಕೊಂಡಿದ್ದು, ಹಾವು–ಚೇಳುಗಳ ಭಯಕ್ಕೆ ಸಾರ್ವಜನಿಕರೂ ಅತ್ತ ಸುಳಿಯಲು ಧೈರ್ಯಮಾಡುತ್ತಿಲ್ಲ. ಹಲವು ವರ್ಷಗಳಿಂದಲೂ ಗ್ರಂಥಾಲಯ ಕಟ್ಟಡ ಸುಣ್ಣಬಣ್ಣ ಕಾಣದಂತಾಗಿದ್ದು, ಎಷ್ಟೋ ವರ್ಷಗಳ ಹಿಂದೆ ಬರೆದಿರುವ ನಾಮಫಲಕದಲ್ಲಿರುವ ಅಕ್ಷರಗಳೂ ಓದುವುದಕ್ಕೆ ಆಗದ ರೀತಿಯಲ್ಲಿ ಅಳಿಸಿಹೋಗಿವೆ.

ADVERTISEMENT

ಪ್ರತಿನಿತ್ಯ ಗ್ರಂಥಾಲಯವನ್ನು ತೆರೆಯಬೇಕಾಗಿರುವ ಗ್ರಂಥಪಾಲಕರೂ ಬಂದು ಕಾರ್ಯನಿರ್ವಹಿಸದೇ ನಿತ್ಯವೂ ಬೀಗ ಜಡಿದಂತಿರುವ ಸ್ಥಿತಿಯಲ್ಲಿರುವ ಬಗ್ಗೆ ಗ್ರಾ.ಪಂ ನ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಉದಾಸೀನ ಹಾಗೂ ನಿರ್ಲಕ್ಷ್ಯದ ಬಗ್ಗೆ ಸ್ಥಳೀಯ ಗ್ರಾಮಸ್ಥರು ಬೇಸರವ್ಯಕ್ತಪಡಿಸಿದ್ದಾರೆ. ಕೂಡಲೇ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಬೆಟ್ಟಸ್ವಾಮಿ ಗೌಡ 
6 ತಿಂಗಳಿಂದ ಗ್ರಂಥಾಲಯದ ಬಾಗಿಲು ತೆರೆಯದೇ ಇರುವುದರಿಂದ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ. ಗ್ರಾ.ಪಂ. ಅಧಿಕಾರಿ ಅಧ್ಯಕ್ಷರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ಬೆಟ್ಟಸ್ವಾಮಿಗೌಡ ಗ್ರಾ.ಪಂ. ಸದಸ್ಯ
ದೊಡ್ಡಹೊಸಗಾವಿಯ ಗ್ರಂಥಾಲಯದ ಗ್ರಂಥಪಾಲಕರಿಗೆ ಆರೋಗ್ಯ ಸರಿಯಿಲ್ಲದಿದ್ದರಿಂದ ಈ ಸಮಸ್ಯೆ ಆಗಿರಬಹುದು. ಮುಂದಿನ ದಿನಗಳಲ್ಲಿ ಗ್ರಂಥಾಲಯದ ಸಮರ್ಪಕ ಕಾರ್ಯನಿರ್ವಹಣೆಗೆ ಕ್ರಮ ಕೈಗೊಳ್ಳುತ್ತೇನೆ.
ಸುಮಲತಾ ಪಿಡಿಒ ದೊಡ್ಡಹೊಸಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.