ADVERTISEMENT

ಮಂಡ್ಯ | ಕೈಗಾರಿಕೆ ಸ್ಥಾಪನೆಗೆ 90 ಎಕರೆ ಜಾಗ ಮೀಸಲು: ಶಾಸಕ ರವಿಕುಮಾರ್‌

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 6:00 IST
Last Updated 6 ಜನವರಿ 2026, 6:00 IST
ಮಂಡ್ಯ ತಾಲ್ಲೂಕಿನ ಸಾತನೂರು ಫಾರ್ಮ್‌ನಲ್ಲಿ ‘ಕಾಡಾ’ಗೆ ಸೇರಿದ ಸರ್ವೇ ನಂ 257ರಲ್ಲಿರುವ 90 ಎಕರೆ ಜಾಗವನ್ನು ಕೈಗಾರಿಕೆ ಸ್ಥಾಪನೆ ಸಂಬಂಧ ಸೋಮವಾರ ಮಂಡ್ಯ ಶಾಸಕ ಪಿ.ರವಿಕುಮಾರ್ ಮತ್ತು ಜಿಲ್ಲಾಧಿಕಾರಿ ಕುಮಾರ ಪರಿಶೀಲಿಸಿದರು
ಮಂಡ್ಯ ತಾಲ್ಲೂಕಿನ ಸಾತನೂರು ಫಾರ್ಮ್‌ನಲ್ಲಿ ‘ಕಾಡಾ’ಗೆ ಸೇರಿದ ಸರ್ವೇ ನಂ 257ರಲ್ಲಿರುವ 90 ಎಕರೆ ಜಾಗವನ್ನು ಕೈಗಾರಿಕೆ ಸ್ಥಾಪನೆ ಸಂಬಂಧ ಸೋಮವಾರ ಮಂಡ್ಯ ಶಾಸಕ ಪಿ.ರವಿಕುಮಾರ್ ಮತ್ತು ಜಿಲ್ಲಾಧಿಕಾರಿ ಕುಮಾರ ಪರಿಶೀಲಿಸಿದರು   

ಮಂಡ್ಯ: ‘ಜಿಲ್ಲೆಯಲ್ಲಿ ನಿರುದ್ಯೋಗವನ್ನು ಹೋಗಲಾಡಿಸಲು ಜಿಲ್ಲೆಗೆ ಕಾರ್ಖಾನೆಗಳು ಬರಬೇಕು. ಹಾಗಾಗಿ ಸಾತನೂರು ಫಾರ್ಮ್ ನಲ್ಲಿ ಕಾಡಾಗೆ ಸೇರಿದ ಸರ್ವೇ ನಂ 257ರಲ್ಲಿರುವ 90 ಎಕರೆ ಜಾಗವನ್ನು ಸೋಮವಾರ ವಿಕ್ಷಣೆ ಮಾಡಲಾಗಿದೆ’ ಎಂದು ಮಂಡ್ಯ ಶಾಸಕ ಪಿ.ರವಿಕುಮಾರ್ ಹೇಳಿದರು.

ಸಾತನೂರು ಫಾರ್ಮ್‌ನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಈ ಜಾಗ ಅಚ್ಚುಕಟ್ಟಾದ ಪ್ರದೇಶವಾಗಿದೆ. ಜಾಗವನ್ನು ಖಾಲಿ ಬಿಡುವುದಕ್ಕಿಂತ ಕೈಗಾರಿಕೆಗೆ ಮೀಸಲಿಡಬೇಕು. ಈಗಾಗಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಈ ಜಾಗಕ್ಕೆ ಕಾರ್ಖಾನೆಗಳು ಬರುವುದಾದರೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಕೈಗಾರಿಕೆಗೆ ಮೀಸಲಿಡೋಣ ಎಂದು ಹೇಳಿದ್ದಾರೆ ಎಂದರು.

ಕೈಗಾರಿಕೆ ಸ್ಥಾಪನೆಗೆ ಕೊಡಬಹುದಾದ ಸ್ಥಳವನ್ನು ವೀಕ್ಷಣೆ ಮಾಡಲು ಆಗಮಿಸಿದ್ದೇನೆ. ಜಾಗವು ಉತ್ತಮವಾಗಿದ್ದು ಮೂರು ಕಡೆಯಿಂದ ರಸ್ತೆ ಸಂಪರ್ಕವಿದೆ. ನೀರಿನ ಸೌಲಭ್ಯವು ಸೂಕ್ತವಾಗಿದ್ದು ನಗರಕ್ಕೆ ಹೊಂದಿಕೊಂಡಂತಿದೆ. ವಿದೇಶಗಳಿಂದ ಬರುವ ಕಾರ್ಖಾನೆಗಳಿಗಾಗಿ ನೀಡಬೇಕಾದ ಎಲ್ಲ ಸೌಕರ್ಯಗಳು ಇಲ್ಲಿ ಲಭ್ಯವಿದೆ.  ಕೈಗಾರಿಕೆ ಮೀಸಲಿಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ADVERTISEMENT

ಸದರಿ ಜಾಗದಲ್ಲಿ 90 ಎಕರೆ ಜಾಗವಿದ್ದು ಹೆಚ್ಚುವರಿ 10 ಎಕರೆ ಜಾಗವನ್ನು ಭೂಸ್ವಾಧೀನಗೊಳಿಸಲಾಗುವುದು. ಸಾವಿರ ಎಕರೆ ಅಗತ್ಯವಿದ್ದರೂ ಭೂಸ್ವಾಧೀನ ಮಾಡಿ ಜಾಗವನ್ನು ಕೈಗಾರಿಕೆ ಮೀಸಲಿಡುತ್ತೇವೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಕುಮಾರ, ಉಪವಿಭಾಗಾಧಿಕಾರಿ ಶಿವಮೂರ್ತಿ, ಮಂಡ್ಯ ತಹಶೀಲ್ದಾರ್ ವಿಶ್ವನಾಥ್, ಮನ್‌ಮುಲ್‌ ಅಧ್ಯಕ್ಷ ಶಿವಪ್ಪ ಪಾಲ್ಗೊಂಡಿದ್ದರು. 

Highlights - ಕೈಗಾರಿಕೆಗೆ ಅಗತ್ಯವಾದ ಜಾಗ ನೀಡಲು ಸಿದ್ಧ  90 ಎಕರೆ ಕೈಗಾರಿಕೆಗೆ ಮೀಸಲಿಡಲು ಸಿಎಂ ಒಪ್ಪಿಗೆ  ನಗರಕ್ಕೆ ಸಮೀಪ, ಮೂಲಸೌಕರ್ಯವೂ ಲಭ್ಯ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.