(ಸಾಂದರ್ಭಿಕ ಚಿತ್ರ)
(ಕೃಪೆ–ಫೇಸ್‌ಬುಕ್)
ಮಂಡ್ಯ: ನಗರದ ಡ್ಯಾಫೋಡಿಲ್ಸ್ ಶಾಲೆಯ ತ್ರಿಷಾ.ಪಿ ಗೌಡ ಮತ್ತು ಎಚ್.ವಿ.ಕುಮುದಾ ಅವರು ರಾಜ್ಯ ಮಟ್ಟದ ಪ್ರಥಮ ಟೆಲಿಸ್ಕೋಪ್ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಮೂಲಕ ಸ್ಥಳದಲ್ಲೇ ಟೆಲಿಸ್ಕೋಪ್ ತಯಾರಿಸಿ ದಾಖಲೆ ಮಾಡಿದ್ದಾರೆ ಎಂದು ವಿಎಲ್‌ಎನ್ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಸುಜಾತಾ ಕೃಷ್ಣ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ‘ದೊಡ್ಡಬಳ್ಳಾಪುರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಇಸ್ರೋ, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಹಯೋಗದಲ್ಲಿ ಈಚೆಗೆ ನಡೆದ ‘ನಾನೂ ವಿಜ್ಞಾನಿ-2025’ ಶಿಬಿರದಲ್ಲಿ ಭಾಗವಹಿಸಿ ಸ್ಥಳದಲ್ಲೇ ಟೆಲಿಸ್ಕೋಪ್ ತಯಾರಿಸಿದ್ದಾರೆ’ ಎಂದರು.
‘ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಅಧ್ಯಕ್ಷ ಹುಲಿಕಲ್ ನಟರಾಜ್ ಅವರ ಮಾರ್ಗದರ್ಶನದಲ್ಲಿ ಟೆಲಿಸ್ಕೋಪ್ ತಯಾರಿಸಿ ರಾಜ್ಯಪಾಲರಿಂದ ಪ್ರಶಸ್ತಿ ಪಡೆದ ನಮ್ಮ ಶಾಲೆಯ ವಿದ್ಯಾರ್ಥಿಗಳ ಸಾಧನೆಯು ವರ್ಲ್ಡ್ ಬುಕ್ ಆಫ್ ರೆಕಾರ್ಡ್, ಇಂಡಿಯನ್ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್ ರೆಕರ್ಡ್‌ನಲ್ಲಿ ದಾಖಲಾಗಿದೆ’ ಎಂದು ವಿವರಿಸಿದರು.
ಟ್ರಸ್ಟ್ ಅಧ್ಯಕ್ಷ ಪ್ರದೀಪ್‌ಕುಮಾರ್ ಹೆಬ್ರಿ, ಮುಖ್ಯ ಶಿಕ್ಷಕಿ ಸಿ.ಎನ್.ನಯನಾ ಇದ್ದರು.