
ಪ್ರಜಾವಾಣಿ ವಾರ್ತೆ
ಮದ್ದೂರು: ತಾಲ್ಲೂಕಿನ ಉಪ್ಪಿನಕೆರೆ ಬಳಿ ಶುಕ್ರವಾರ ಬೆಳಿಗ್ಗೆ ಐದು ಕಾಡಾನೆಗಳು ಗೋಚರವಾಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದವು.
ಚನ್ನಪಟ್ಟಣದ ಅರಣ್ಯ ಪ್ರದೇಶದ ಕಡೆಯಿಂದ ಬಂದಿರಬಹುದೆನ್ನಲಾದ ಕಾಡಾನೆಗಳು ಗ್ರಾಮದ ಕಬ್ಬಿನಗದ್ದೆಗಳಲ್ಲಿ ಕಬ್ಬನ್ನು ತಿನ್ನುತ್ತಿದ್ದವು. ಕಬ್ಬಿನ ಜಮೀನುಗಳಲ್ಲಿ ಆನೆಗಳನ್ನು ನೋಡಿ ಭಯಭೀತರಾದ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಬಳಿಕ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಗವಿಯಪ್ಪ ಹಾಗೂ ಸಿಬ್ಬಂದಿ ಆಗಮಿಸಿ ಆನೆಗಳು ಗ್ರಾಮದ ಪರಿಮಿತಿಗೆ ಹೋಗದಂತೆ ಕಾವಲು ಕಾಯ್ದರು. ಸಂಜೆಯ ನಂತರ ಕಾಡಾನೆಗಳನ್ನು ಅರಣ್ಯದತ್ತ ಓಡಿಸಲಾಗುತ್ತದೆ ಎಂದು ವಲಯ ಅರಣ್ಯಧಿಕಾರಿ ಗವಿಯಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.