ADVERTISEMENT

ದಸರಾ ಉತ್ಸವ|ಹಾಲು ಕರೆಯುವ ಸ್ಪರ್ಧೆ: 38 KG ಹಾಲು ಕೊಟ್ಟ ಹಸುವಿಗೆ ಪ್ರಥಮ ಬಹುಮಾನ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 16:06 IST
Last Updated 25 ಸೆಪ್ಟೆಂಬರ್ 2025, 16:06 IST
   

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ದಸರಾ ಉತ್ಸವದ ನಿಮಿತ್ತ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯಲ್ಲಿ ಗಂಜಾಂನ ನಿಶಾಂತ್ ಶಿವರಾಂ ಅವರ ಮಿಶ್ರ ತಳಿಯ ಹಸು ಎರಡೂ ಹೊತ್ತುಗಳಿಂದ ಒಟ್ಟು 38 ಕೆ.ಜಿ 300 ಗ್ರಾಂ ಹಾಲು ಕರೆದು ಪ್ರಥಮ ಸ್ಥಾನ ಪಡೆಯಿತು.

ಪಾಂಡವಪುರ ತಾಲ್ಲೂಕು ಎಲೆಕೆರೆ ಗ್ರಾಮದ ರವಿಕುಮಾರ್ ಅವರ ಹಸು 36 ಕೆ.ಜಿ 900 ಗ್ರಾಂ ಹಾಲು ಕರೆದು ದ್ವಿತೀಯ ಸ್ಥಾನ ಗಳಿಸಿತು. ತಾಲ್ಲೂಕಿನ ದೊಡ್ಡಪಾಳ್ಯ ಗ್ರಾಮದ ರಂಜಿತ್ ಅವರ ಹಸು 35 ಕೆ.ಜಿ 850 ಗ್ರಾಂ ಹಾಲು ಕರೆದು ಮೂರನೇ ಸ್ಥಾನ ಪಡೆದರೆ, ಸಬ್ಬನಕುಪ್ಪೆ ಗ್ರಾಮದ ಗಿರೀಶ್ ಅವರ ಹಸು 33 ಕೆ.ಜಿ 850 ಗ್ರಾಂ ಹಾಲು ಕರೆದು ನಾಲ್ಕನೇ ಸ್ಥಾನ ಗಳಿಸಿತು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್. ನಂದಿನಿ ಅಧಿಕ ಹಾಲು ನೀಡಿದ ಹಸುಗಳಿಗೆ ಕ್ರಮವಾಗಿ ₹50 ಸಾವಿರ, ₹30 ಸಾವಿರ, ₹20 ಸಾವಿರ, ₹10 ಸಾವಿರ ನಗದು ಮತ್ತು ಟ್ರೋಫಿ ವಿತರಿಸಿದರು. ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಶಿವಲಿಂಗಯ್ಯ, ಸಹಾಯಕ ನಿರ್ದೇಶಕ ಡಾ.ಪ್ರವೀಣ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.